ಎನ್ ಎಸ್ ಎಸ್ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಶಿಸ್ತು, ಸಹಕಾರ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ: ಶಿವಮಾದಯ್ಯ ಕೆ ಎನ್.
ಎನ್ ಎಸ್ ಎಸ್ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಶಿಸ್ತು, ಸಹಕಾರ, ನಾಯಕತ್ವ ಗುಣಗಳನ್ನು ಬೆಳೆಸುತ್ತದೆ: ಶಿವಮಾದಯ್ಯ ಕೆ ಎನ್.
ವರದಿ ಹುಚ್ಚೀರಪ್ಪ ವೀರಪ್ಪ ಈಟಿ
ಕಲ್ಯಾಣ ಕಹಳೆ ಗಜೇಂದ್ರಗಡ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆಎಸ್ಎಸ್ ಪದವಿ ಪೂರ್ವ ವಿದ್ಯಾಲಯ (JG 0199) ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಅಡಿಯಲ್ಲಿ ದತ್ತು ಪಡೆದಿರುವ ಶ್ರೀ ಕಾಲಕಾಲೇಶ್ವರ ಗ್ರಾಮಕ್ಕೆ ,ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವುದರ ಜತೆಗೆ ಸಾಮಾಜಿಕ ಜವಾಬ್ದಾರಿ, ಶಿಸ್ತು, ಸಹಕಾರ ಹಾಗೂ ನಾಯಕತ್ವ ಗುಣಗಳನ್ನು ರೂಪಿಸುವ ಮಹತ್ತದ ವೇದಿಕೆಯಾಗಿದೆ ಎಂದು ಎನ್ಎಸ್ಎಸ್ ರಾಜ್ಯ ಸಂಯೋಜನಾಧಿಕಾರಿ ಶಿವಮಾದಯ್ಯ ಕೆ.ಎನ್. ಹೇಳಿದರು.
ತರಗತಿಯ ನಾಲ್ಕು ಗೋಡೆಗಳಾಚೆ ಸಮಾಜದ ನಡುವೆ ಕಾರ್ಯನಿರ್ವಹಿಸುವುದರಿಂದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ವಾಸ್ತವಿಕತೆ ತಿಳಿಯುತ್ತದೆ. ಜನರೊಂದಿಗೆ ಬೆರೆಯುವುದು, ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಸಾಮೂಹಿಕ ಪ್ರಯತ್ನದ ಮೂಲಕ ಪರಿಹಾರ ಕಂಡುಕೊಳ್ಳುವುದು ಅವರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ. ಎನ್ಎಸ್ಎಸ್ನಲ್ಲಿ ದೊರೆಯುವ ಅನುಭವವು ಭವಿಷ್ಯದಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ನೆರವಾಗುತ್ತದೆ ಎಂದು ಹೇಳಿದರು.
ಶ್ರಮದಾನ ಕಲಿಸುವುದು ದುಡಿಮೆಯ ಗೌರವ ,ಶ್ರಮದಾನವು ವಿದ್ಯಾರ್ಥಿಗಳಿಗೆ ದುಡಿಮೆಯ ಮಹತ್ವವನ್ನು ತಿಳಿಸುವುದರ ಜತೆಗೆ, ಒಗ್ಗಟ್ಟಿನಿಂದ ಕೆಲಸ ಮಾಡುವ ಗುಣವನ್ನು ಬೆಳೆಸುತ್ತದೆ. ಸ್ವಚ್ಛತೆ, ಶಿಸ್ತು, ಸಹಕಾರ ಮತ್ತು ಸಾರ್ವಜನಿಕ ಆಸ್ತಿಯ ಸಂರಕ್ಷಣೆಯಂತಹ ಮೌಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಯಲು ಇಂತಹ ಶಿಬಿರಗಳು ನೆರವಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದರೊಂದಿಗೆ, ಸಮಾಜದ ಒಳಿತಿಗಾಗಿ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ಸಾಮಾಜಿಕ ಕಳಕಳಿ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಇಂತಹ ಸಾರ್ಥಕ ಭೇಟಿಗಳು ಸೇವಾ ಚಟುವಟಿಕೆಗಳಿಗೆ ಮತ್ತಷ್ಟು ಪ್ರೇರಣೆ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಒಂದು ಕಾರ್ಯಕ್ರಮದಲ್ಲಿ
ಅಧ್ಯಕ್ಷತೆ : ಶ್ರೀ ಮಲ್ಲಯ್ಯ, ಕೆ. ಗುರುಸ್ಥಲಮಠ, ಆರ್ಚಕರು, ಕಾಲಕಾಲೇಶ್ವರ ಇವರು ವಹಿಸಿದ್ದರು.
೧)ಅಥಿತಿ ಉಪನ್ಯಾಸಕರು
ಶ್ರೀ ಬಿ ಕೆ ಮಾದಿ , ಉಪನ್ಯಾಸಕರು
ವಿಷಯ : ಜನಪದ ಸಾಹಿತ್ಯ ಉಪನ್ಯಾಸ ನೀಡಿದರು
೨) ಶ್ರೀ ಬಿ. ಎನ್. ಮಾಸಕಟ್ಟಿ, ದೈ.ಶಿ.ಸ.ಹಿ.ಪ್ರೌ.ಶಾಲೆ, ವಜ್ರಬಂಡಿ.
೩)ಶ್ರೀ ಸುರೇಶ ಹೊಸಮನಿ, ದೈ.ಶಿ. ಕಲ್ಲೂರ.
ವಿಷಯ : ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರದ ಕುರಿತು ಉಪನ್ಯಾಸ ನೀಡಿದರು
ಮುಖ್ಯ ಅತಿಥಿಗಳಾಗಿ ಶ್ರೀ ಶಂಕ್ರಪ್ಪ ಮ್ಯಾಗೇರಿ.ಶ್ರೀ ನಂದೀತ ಪವಾರ.,ಶ್ರೀ ಶಂಕ್ರಪ್ಪ, ಮ. ಹೂಗಾರ.ಶ್ರೀ ಚನ್ನಪ್ಪ, ಮ. ಹೂಗಾರ.,ಶ್ರೀ ಕಳಕಪ್ಪ ಯ ಕನ್ಯಾಳ,,ಶ್ರೀ ಶರಣಪ್ಪ ಬಾರಕೇರ.
ಶ್ರೀ ಷಣ್ಮಖಪ್ಪ ನರೇಗಲ್ಲ,ಶ್ರೀಬಸವರಾಜ, ಬಿ. ಗಡಾದ,ಶ್ರೀ ಕಳಕಪ್ಪ ರಾ. ಪೂಜಾರ.ಶ್ರೀ ಬಸವರಾಜ ಚಿಲ್ ಝರಿ.ಶ್ರೀ ಲಕ್ಷ್ಮಣ ಮಾಳೋತ್ತರ
ಶ್ರೀ ದುರಗಪ್ಪ ಭಜಂತ್ರಿ,ಶ್ರೀ ಮಾರುತೆಪ್ಪ, ಹ. ಭಜಂತ್ರಿ
ಅಧಿಕಾರಿಗಳಾದ ದೇವು ಕಟ್ಟಿಮನಿ,, ಕಾಲೇಜಿನ ಪ್ರಾಚಾರ್ಯರು ,ಹೆಚ್ ಎನ್ ಗೌಡರ, ಉಪನ್ಯಾಸಕರಾದ ಎಸ್ ಬಿ ಪೂಜಾರ್, ಎಮ್ ಎ ಮಳಗಾವಿ ,ಎಲ್ ಕೆ ಚಂದುಕರ್, ಶಿವು ಅಚಲಕಾರ್ ಮುಂತಾದ ಉಪನ್ಯಾಸಕರ ಬಳಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

