ಕಾವ್ಯಧಾರೆಗೆ ಸಾಕ್ಷಿಯಾದ ದಸರಾ ಸಂಭ್ರಮ

ಕಾವ್ಯಧಾರೆಗೆ ಸಾಕ್ಷಿಯಾದ ದಸರಾ ಸಂಭ್ರಮ

ಕಾವ್ಯಧಾರೆಗೆ ಸಾಕ್ಷಿಯಾದ ದಸರಾ ಸಂಭ್ರಮ

ವರದಿ ಹುಚ್ಚೀರಪ್ಪ ವೀರಪ್ಪ ಈಟಿ ,ಕಲ್ಯಾಣ ಕಹಳೆ ಗದಗ: ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿದ್ದು, ಕವಿಗಳು ತಮ್ಮ ಬರಹಗಳ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಎತ್ತಿಹಿಡಿದು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಿ.ಎಚ್. ಪರಂಗಿ ಹೇಳಿದರು.

ನಗರದ ಹಾತಲಗೇರಿ ನಾಕದ ಹಾಲಕೇರಿ ಮಠದ ಅನ್ನದಾನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಅಕ್ಟೋಬರ್ 13ರಂದು ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ (ರಿ.), ಹೊಳೆಆಲೂರ ಹಾಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ಗದಗ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ದಸರಾ ಕಾವ್ಯೋತ್ಸವ–2026 ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಗದಗ ಜಿಲ್ಲಾ ಶಾಖೆಯ ಅಧ್ಯಕ್ಷ ಬಸವರಾಜ ಎಂ. ಕಡೆಮನಿ ಅವರು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾಜದ ವಿವಿಧ ವರ್ಗಗಳ ಜನರನ್ನು ಒಗ್ಗೂಡಿಸುವ ವೇದಿಕೆಗಳಾಗಿವೆ. 

ಇಂತಹ ಕಾರ್ಯಕ್ರಮಗಳು ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೂ ಸಹಕಾರಿಯಾಗುತ್ತವೆ ಎಂದರು.

ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷೆ ಶೋಭಾ ಎಸ್. ಆಡಿನ ಅವರು ರೇಣುಕಾ ಮಾದರ ರಚಿಸಿದ ‘ಕಣ್ಣಂಚಿನ ಕಾವ್ಯ’ ಪುಸ್ತಕ ಬಿಡುಗಡೆಗೊಳಿಸಿದರು.

 ಪುಸ್ತಕಗಳು ಬರಹಗಾರರ ಅನುಭವ, ಭಾವನೆ ಹಾಗೂ ಚಿಂತನೆಗಳನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಪರಿಣಾಮಕಾರಿ ಮಾಧ್ಯಮಗಳಾಗಿವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಹೊಳೆಆಲೂರ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಕೆ. ಪಟೇಲ್ ಅವರು ಮಾತೋಶ್ರೀ ಫೌಂಡೇಶನ್‌ನ ಲೋಗೊ ಅನಾವರಣಗೊಳಿಸಿ ಮಾತನಾಡಿ, 

ಸಂಸ್ಥೆಯ ಉದ್ದೇಶ, ಧ್ಯೇಯ ಹಾಗೂ ಸಮಾಜಮುಖಿ ಕಾರ್ಯಗಳ ಮಹತ್ವವನ್ನು ವಿವರಿಸಿದರು. ಆರೋಗ್ಯ, ಶಿಕ್ಷಣ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡಿ, ಜನರ ಸಹಕಾರದೊಂದಿಗೆ ಸಂಸ್ಥೆಯು ತನ್ನ ಸೇವಾ ಚಟುವಟಿಕೆಗಳನ್ನು ವಿಸ್ತರಿಸಲಿ ಎಂದು ಆಶಿಸಿದರು.

ಎಸ್.ಕೆ. ಆಡಿನ ಅವರು ಪ್ರಾಸ್ತಾವಿಕ ನುಡಿ ಮಾತನಾಡಿ, ದಸರಾ ಕಾವ್ಯೋತ್ಸವದ ಉದ್ದೇಶ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದಾಗಿದೆ. ಕವಿಗಳು, ಸಾಹಿತಿಗಳು ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ ಎಂದರು.

ಕವಿಗೋಷ್ಠಿಯ ಆಶಯ ನುಡಿ ನೀಡಿದ ಎ.ಎಸ್. ಮಕಾನದಾರ ಅವರು ಕವಿತೆ ಬದುಕಿನ ಅನುಭವಗಳನ್ನು ಅಭಿವ್ಯಕ್ತಿಸುವ ಹಾಗೂ ಸಮಾಜದ ಸಮಸ್ಯೆಗಳ ಕುರಿತು ಚಿಂತನೆಗೆ ಹಚ್ಚುವ ಸೃಜನಶೀಲ ಪ್ರಕಾರವಾಗಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಆಯ್.ಕೆ. ಕಮ್ಮಾರ ಅವರು ಕವಿಗಳು ತಮ್ಮ ಸ್ವರಚಿತ ಕವನಗಳ ಮೂಲಕ ನಾಡು, ನುಡಿ, ಮಾನವೀಯತೆ ಮತ್ತು ಸಾಮಾಜಿಕ ಸಾಮರಸ್ಯದ ಸಂದೇಶಗಳನ್ನು ಸಾರಬೇಕು ಎಂದರು.

ಬಂಗಾರಗುಂಡ ಗುಡದಪ್ಪ ಅವರು ‘ಕಣ್ಣಂಚಿನ ಕಾವ್ಯ’ ಪುಸ್ತಕದ ಪರಿಚಯ ಮಾಡಿಕೊಟ್ಟರು.

ಸಾಧಕರಿಗೆ ‘ದಸರಾ ಸಾಧಕ ರತ್ನ’ ಗೌರವ

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರಲ್ಹಾದ ಮುಂಡಾಸದ, ವಿನೋದ ಸಿ. ಪಟೇಲ್, ಎಂ.ಎಸ್. ಶೀಲವಂತ, ಮೀನಾಕ್ಷಿ ಶಿ. ಬೆನಕಣ್ಣವರ, ಶಕುಂತಲಾ ಎಚ್. ಅಕ್ಕಿ ಹಾಗೂ ಮಂಜುಳಾ ಚ. ಅಕ್ಕಿ ಅವರಿಗೆ ‘ದಸರಾ ಸಾಧಕ ರತ್ನ’ ಗೌರವ ನೀಡಿ ಸನ್ಮಾನಿಸಲಾಯಿತು.

ದಸರಾ ನಾದ–ಕುಂಚ ಸಂಭ್ರಮ ಹಾಗೂ ಕವಿಗೋಷ್ಠಿ

ರಮೇಶ ಹಾದಿಮನಿ, ಪ್ರಕಾಶ ಕಮ್ಮಾರ ಹಾಗೂ ಕಳಕೇಶ ಅರಕೇರಿ ಅವರಿಂದ ದಸರಾ ನಾದ–ಕುಂಚ ಸಂಭ್ರಮ ನಡೆಯಿತು.

 ಕವಿಗೋಷ್ಠಿಯಲ್ಲಿ ಸುಮಾರು 35 ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

 ಕಾರ್ಯಕ್ರಮದಲ್ಲಿ ವಿ.ವಿ. ಹಿರೇಮಠ ಮೆಮೋರಿಯಲ್ ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ, ಈಶ್ವರ ದೇವಸ್ಥಾನ ಕಮಿಟಿಯ ಅಧ್ಯಕ್ಷ ಚನ್ನಬಸಪ್ಪ ಅಕ್ಕಿ, ನಿವೃತ್ತ ಶಿಕ್ಷಕ ಕೆ.ಎಸ್. ಬಾರಕೇರ, ಮಾತೋಶ್ರೀ ಫೌಂಡೇಶನ್ ಅಧ್ಯಕ್ಷ ಸತೀಶ ಮುಂಡಾಸದ, ಆನಂದ ಸಿಂಗಾಡಿ, ಹೊಳಬಸಪ್ಪ ಅಕ್ಕಿ, ಪಿ.ಪಿ. ವಾಲ್ಮೀಕಿ, ಶಿವಾನಂದ ಕಟ್ಟಿ, ಹುಚ್ಚೀರಪ್ಪ ಈಟಿ, ಭಾಗ್ಯ ಹುರಕಡ್ಲಿ, ರಮಾ ಚಿಗಟೇರಿ, ಚಿದಾನಂದ ಮುಂಡಾಸದ, ಮರಳುಸಿದ್ದಪ್ಪ ದೊಡ್ಡಮನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಭೀಮಾಂಭಿಕಾ ಕಾರ್ಯಕ್ರಮ ನಿರೂಪಿಸಿದರು. 

ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯೋಜಿಸಲಾದ ದಸರಾ ಕಾವ್ಯೋ

ತ್ಸವವು ಸಾಹಿತ್ಯಾಸಕ್ತರ ಗಮನ ಸೆಳೆಯಿತು.