ತೊಗರಿ ನಾಡಲ್ಲಿ ಸಿನಿಮಾ ನಟ ಪ್ರೇಮ್ ಗೆ ಆತ್ಮೀಯ ಸ್ವಾಗತ
ತೊಗರಿ ನಾಡಲ್ಲಿ ಸಿನಿಮಾ ನಟ ಪ್ರೇಮ್ ಗೆ ಆತ್ಮೀಯ ಸ್ವಾಗತ
ಕಲಬುರಗಿ : ತೊಗರಿಯ ನಾಡು ಕಲಬುರಗಿಗೆ ಆಗಮಿಸಿದ ಕನ್ನಡದ ಖ್ಯಾತ ಸಿನಿಮಾ ನಟ ಪ್ರೇಮ್ ಅವರಿಗೆ ಅಭಿಮಾನಿಗಳು ಆತ್ಮೀಯ ಸ್ವಾಗತ ಕೋರಿದರು.
ಕಲಬುರಗಿಗೆ ಅ.14ರಂದು ಶಹಾಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ "ನೆನಪಿರಲಿ" ಜನಪ್ರಿಯ ಚಿತ್ರದ ನಾಯಕ ಪ್ರೇಮ್ ಅವರನ್ನು ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಕಲಬುರಗಿಯ ಹೋಟೆಲ್ ಬೃಂದಾವನ ಗ್ರ್ಯಾಂಡ್ ನಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ ಸದಾನಂದ ಪೆರ್ಲ, ಗುರುರಾಜ್ ಬಂಡಿ, ಮಹೇಶ್ ಕಡೇ ಚೂರ್, ಚನ್ನಬಸವ ತೊರವಿ, ಚಾಂದಿನಿ ಶೇಖರ್, ಮೌನೇಶ್, ಗೋರಕನಾಥ್ ಮತಿತರು ಇದ್ದರು ಪ್ರೇಮ್ ಅವರಿಗೆ "ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು"ಕೃತಿ ಹಾಗೂ ಶಾಲು ನೀಡಿ ವಿಶೇಷವಾಗಿ ಸತ್ಕರಿಸಲಾಯಿತು. ಅಭಿಮಾನಿಗಳ ಪ್ರೀತಿಗೆ , ಪ್ರೇಮ್ ವಂದನೆಗಳನ್ನು ತಿಳಿಸಿ ಮತ್ತೆ ನಿಮ್ಮ ಭೇಟಿಗೆ ಆಗಮಿಸುತ್ತೇನೆ ಎಂದು ಹೇಳಿದರು.

