ಧರ್ಮಸ್ಥಳ ಸಂಘದಿಂದ ಜಾನುವಾರು ಉಚಿತ ಆರೋಗ್ಯ ತಪಾಸಣೆ ಶಿಬಿರ

ಧರ್ಮಸ್ಥಳ ಸಂಘದಿಂದ ಜಾನುವಾರು ಉಚಿತ ಆರೋಗ್ಯ ತಪಾಸಣೆ ಶಿಬಿರ

ಧರ್ಮಸ್ಥಳ ಸಂಘದಿಂದ ಜಾನುವಾರು ಉಚಿತ ಆರೋಗ್ಯ ತಪಾಸಣೆ ಶಿಬಿರ 

ಶಹಾಪೂರ : ತಾಲೂಕಿನ ಗೋಗಿ ಕೆ.ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಶಹಪುರ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಜಾನುವಾರುಗಳಿಗೆ ಉಚಿತ ಅರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.

ಗ್ರಾಮದ 45 ಕರುಗಳಿಗೆ ಜಂತು ನಾಶಕ ಔಷಧಿ ಕುಡಿಸಲಾಯಿತು,34 ರೋಗಗ್ರಸ್ಥ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು,123 ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಚರ್ಮ ಗಂಟು ರೋಗ ನಿವಾರಕ ಲಸಿಕೆ ಹಾಕಲಾಯಿತು, 134 ಕುರಿ ಹಾಗು ಆಡುಗಳಿಗೆ ಜಂತು ನಾಶಕ ಔಷಧಿ ನೀಡಲಾಯಿತು,

ಈ ಕುರಿತು ಮಾತನಾಡಿದ ಡಾ: ಅಣ್ಣಾರಾವ ಪಾಟೀಲ್ ಮುಖ್ಯ ಪಶುವೈದ್ಯಾಧಿಕಾರಿ ಶಹಾಪೂರ ರವರು ಜಾನುವಾರುಗಳ ಆರೋಗ್ಯದ ಕುರಿತು ಎಚ್ಚರ ವಹಿಸಬೇಕು ಎಂದರು ಹೇಳಿದರು.ಭತ್ತದ ರಾಶಿಯ ನಂತರ ಭತ್ತದ ಹುಲ್ಲನ್ನು ಸುಡಬಾರದು ಹಾಗು ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ಸಾಗಾಣಿಕೆ ಮಾಡಬಾರದು ಅದರ ಬದಲಾಗಿ ಈ ಭಾಗದ ರೈತರಿಗೆ ನೀಡಬೇಕು ಎಂದು ರೈತರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ: ವಾಣಿಶ್ರೀ ಪಶು ಪರೀಕ್ಷಕರಾದ ಶರಣಬಸಪ್ಪ ಸಾವಳಗಿ,ಸುಶೀಲಾದೇವಿ,ಶರಣಬಸಪ್ಪ ಮರಡಿ

ಸಹಾಯಕ ಯಲ್ಲಾಲಿಂಗ ಯಾಸಿನ್,ವಲಯ ಮೇಲ್ವಿಚಾರಕ ಮಂಜುನಾಥ,ಕೃಷಿ ಮೇಲ್ವಿಚಾರಕ ಮಹಾಲಿಂಗ,

ಸೇವಾ ಪ್ರತಿನಿಧಿ ಶರಣಮ್ಮ ಸೇರಿದಂತೆ ಗ್ರಾಮದ ರೈತರು ಹಾಜರಿದ್ದರು...