ನರೇಗಲ್ಲ ಪಟ್ಟಣದ ರಸ್ತೆ ಜಾಲ ಗ್ರಿಡ್ ಯೋಜನೆ (Road network grid pla ಯೋಜನೆಗೆ ಸಾರ್ವಜನಿಕರ ಆಕ್ಷೇಪಣೆ: ನೇರ ರಸ್ತೆಗಳ ನಿರ್ಮಾಣಕ್ಕೆ ಒತ್ತಾಯ ನರೇಗಲ್ಲ (ಗದಗ)
ನರೇಗಲ್ಲ ಪಟ್ಟಣದ ರಸ್ತೆ ಜಾಲ ಗ್ರಿಡ್ ಯೋಜನೆ (Road network grid pla ಯೋಜನೆಗೆ ಸಾರ್ವಜನಿಕರ ಆಕ್ಷೇಪಣೆ: ನೇರ ರಸ್ತೆಗಳ ನಿರ್ಮಾಣಕ್ಕೆ ಒತ್ತಾಯ
ನರೇಗಲ್ಲ (ಗದಗ)
ಕಲ್ಯಾಣ ಕಹಳೆ ನರೇಗಲ್ಲ. ಪಟ್ಟಣದ ರಸ್ತೆ ಜಾಲ ಗ್ರಿಡ್ ಯೋಜನೆ (Road network grid plan) ಸಂಬಂಧಿಸಿದಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ನರೇಗಲ್ಲ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮೀಣ ನಾಗರಿಕರ ಪರವಾಗಿ ಆಕ್ಷೇಪಣೆ ಅರ್ಜಿ ಸಲ್ಲಿಸಲಾಗಿದೆ.
ಸುಮಾರು 25,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಸುತ್ತಮುತ್ತಲಿನ 25ಕ್ಕೂ ಹೆಚ್ಚು ಗ್ರಾಮಗಳಿಗೆ ಶೈಕ್ಷಣಿಕ, ಕೃಷಿ ಹಾಗೂ ವ್ಯಾಪಾರ ವಹಿವಾಟಿನ ಪ್ರಮುಖ ಕೇಂದ್ರವಾಗಿದೆ. ಆದರೆ ಕಳೆದ 30 ವರ್ಷಗಳಿಂದ ನರೇಗಲ್ಲನಿಂದ ಗಜೇಂದ್ರಗಡ, ಇಲಕಲ್ ಮತ್ತು ಕುಷ್ಟಗಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುಸಜ್ಜಿತವಾಗಿಲ್ಲ.
ಅಲ್ಲದೆ, ಸುಮಾರು 46 ವರ್ಷಗಳ ಹಿಂದೆ ಸಮೀಕ್ಷೆಯಾಗಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ಇಲಕಲ್ ರಾಜ್ಯ ಹೆದ್ದಾರಿ ಯೋಜನೆಯು ಇಲ್ಲಿಯವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ದಿನಂಪ್ರತಿ ಸಂಚರಿಸುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದರೂ ಅವುಗಳ ದುರಸ್ತಿ ಅಥವಾ ಮರುನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಆಕ್ಷೇಪಣೆಯ ಮುಖ್ಯ ಅಂಶಗಳು:
• ನರೇಗಲ್ಲ ಪಟ್ಟಣವು ಕಲ್ಯಾಣ ಕರ್ನಾಟಕದೊಂದಿಗೆ ಸುಮಾರು 8 ರಸ್ತೆಗಳನ್ನು ಹಂಚಿಕೊಳ್ಳುತ್ತಿದ್ದು, ಎರಡೂ ಭಾಗಗಳನ್ನು ಜೋಡಿಸುವ ಪ್ರಮುಖ ಕೊಂಡಿಯಾಗಿದೆ.
• ಸಾರ್ವಜನಿಕರಿಗೆ ಅತ್ಯಂತ ಅಗತ್ಯವಿರುವ ಇಲಕಲ್ ರಾಜ್ಯ ಹೆದ್ದಾರಿ ರಸ್ತೆಯನ್ನು ಊರಿನ ಮಧ್ಯಭಾಗದಿಂದಲೇ ಹಾದುಹೋಗುವಂತೆ ನಿರ್ಮಿಸಬೇಕು.
• ನರೇಗಲ್ಲ ಹೋಬಳಿಯ ಎಲ್ಲಾ ಗ್ರಾಮಗಳಿಗೆ ಹಾಗೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವ 8 ರಸ್ತೆಗಳನ್ನು ಪ್ರಮುಖವಾಗಿ ದುರಸ್ತಿಗೊಳಿಸಿ ನೇರ ರಸ್ತೆಗಳಾಗಿ ನಿರ್ಮಿಸಬೇಕು.
• ನೇರ ರಸ್ತೆಗಳ ಅಭಿವೃದ್ಧಿಯನ್ನು ಬದಿಗೊತ್ತಿ, ಕೇವಲ 'ವರ್ತುಲ ರಸ್ತೆ' (Ring Road) ನಿರ್ಮಾಣಕ್ಕೆ ಆದ್ಯತೆ ನೀಡಿದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ.
• ಆದ್ದರಿಂದ, "ಮೊದಲು ನೇರ ರಸ್ತೆ, ನಂತರ ವರ್ತುಲ ರಸ್ತೆ" ಎಂಬ ತತ್ತ್ವದಡಿಯಲ್ಲಿ ಮೊದಲು ಪ್ರಮುಖ ನೇರ ರಸ್ತೆಗಳನ್ನು ಸಂಚಾರ ಯೋಗ್ಯವಾಗಿ ಅಭಿವೃದ್ಧಿಪಡಿಸಿ, ನಂತರ ವರ್ತುಲ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೆಂದು ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಒತ್ತಾಯಪೂರ್ವಕವಾಗಿ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ನರೇಗಲ್ಲಿನ ಶ್ರೀ ಅಶೋಕ ಬೇವಿನಕಟ್ಟಿ ಶ್ರೀ ಡಿ ಎ ಅರವಟಿಗಿಮಠ
ಶ್ರೀ ಎಸ್ ಎ ಜಕ್ಕಲಿ ಶ್ರೀ ಶಿವಪುತ್ರಪ್ಪ ಸಂಗನಾಳ ಶ್ರೀ ವೀರಪ್ಪ ಜಿ ಜಿಲ್ರ ಹೋಬಳಿಯ ರೈತರು, ವರ್ತಕರು, ವಿದ್ಯಾರ್ಥಿಗಳು ಹಾಗೂ ಗದಗ-ವಾಡಿ ರೈಲ್ವೆ ಹೋರಾಟ ಸಮಿತಿಯ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು ಶ್ರೀಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

