ಬರಗಾಲ ಘೋಷಣೆ ಕೈ ಬಿಟ್ಟ ಸರಕಾರದ ವಿರುದ್ದ ರೈತರ ಪ್ರತಿಭಟನೆ

ಬರಗಾಲ  ಘೋಷಣೆ ಕೈ ಬಿಟ್ಟ ಸರಕಾರದ ವಿರುದ್ದ ರೈತರ ಪ್ರತಿಭಟನೆ

ಬರಗಾಲ ಘೋಷಣೆ ಕೈ ಬಿಟ್ಟ ಸರಕಾರದ ವಿರುದ್ದ ರೈತರ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಮೂರು ಸಚಿವರುಗಳಿದ್ದರೂ ಜಿಲ್ಲೆಗೆ ಬರಗಾಲ ಘೋಷಣೆ ಭಾಗ್ಯ ಇಲ್ಲ : ರೈತರ ಆಕ್ರೋಶ  

ಚಿಂಚೋಳಿ : ಸರಕಾರ ಚಿಂಚೋಳಿ ತಾಲೂಕವನ್ನು ಬರ ಘೋಷಣೆ ಪಟ್ಟಿಯಿಂದ ಕೈ ಬಿಟ್ಟುರುವದನ್ನು ಖಂಡಿಸಿ, ರೈತರು ಪಟ್ಟಣದ ಸಂಗೋಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಟೈರ್ ಗಳಿಗೆ ಬೆಂಕಿ ಹಂಚಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಪ್ರಮುಖರಾದ ಗೋಪಾಲ ಗಾರಂಪಳ್ಳಿ, ಶರಣಬಸಪ್ಪ ಮಮ್ಮಶೆಟ್ಟಿ, ಗೋಪಾಲರಾವ ಕಟ್ಟಿಮನಿ, ರವಿಶಂಕರ ಮುತ್ತಂಗಿ, ಕೆ.ಎಂ.ಬಾರಿ ಅವರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಸರಕಾರದಲ್ಲಿ ಜಿಲ್ಲೆಯ ಮೂರು ಜನ ಸಚಿವರಿದ್ದರೂ ಬರ ಪೀಡಿತ ಘೊಷಣೆಯ ಪಟ್ಟಿಯಿಂದ ಕಲಬುರಗಿ ಜಿಲ್ಲೆಯನ್ನು ಕೈ ಬಿಡಲಾಗಿದೆ. ಸೂಕ್ತ ಸಮಯಕ್ಕೆ ಮಳೆವಿಲ್ಲದ ಕಾರಣ ರೈತರು ಮುಂಗಾರು ಬಿತ್ತನೆಯ ಬೆಳೆಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ಇದ್ದರಿಂದ ಆರ್ಥಿಕವಾಗಿ ರೈತರು ಕುಗ್ಗಿ ಹೋಗಿದ್ದಾರೆ. ಬರಗಾಲ ಘೋಷಣೆ ಮಾಡುತ್ತದೆಂಬ ವಿಶ್ವಾಸ ರೈತರು ಸರಕಾರದ ಮೇಲೆ ಇಟ್ಟಿದ್ದರು. ಆದರೆ ಸರಕಾರ ಬರಗಾಲ ಘೋಷಣೆ ಪಟ್ಟಿಯಿಂದ ಜಿಲ್ಲೆಯನ್ನು ಕೈ ಬಿಟ್ಟು ರೈತರ ಹೊಟ್ಟೆಯ ಮೇಲೆ ತಣ್ಣಿರು ಹಾಕಿದೆ ಎಂದು ಆರೋಪಿಸಿದರು. ಸಾಲ ಮಾಡಿ ಬಿತ್ತಿದ್ದ ಬೆಳೆಗಳು ನೆಲ ಕಚ್ಚಿದ್ದರಿಂದ ರೈತರಿಗೆ ಆರ್ಥಿಕ ಸಂಕಟ ಎದುರಾಗಿ, ಕಂಗಾಲಾಗಿದ್ದಾರೆ. ಸರಕಾರ ಬರ ಘೋಷಣೆ ಮಾಡದೇ ಇದ್ದರೆ ರೈತರ ಬದುಕುಗಳು ನಾಶವಾಗುವ ಹಂತಕ್ಕೆ ತಲುಪಲಿವೆ. ಹಾಗಾಗಿ ಕಲಬುರಗಿ ಮತ್ತು ಬೀದರ ಜಿಲ್ಲೆಯ ಸಚಿವರುಗಳು ಹಾಗೂ ಸಂಸದರುಗಳು ಸರಕಾರದ ಮೇಲೆ ಒತ್ತಡ ಹೇರುವ ಕೆಲಸ ಅವರಿಂದ ಆಗಬೇಕಾಗಿದೆ. ಈ ಹಿನ್ನಲೆಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ಜಿಲ್ಲೆಯನ್ನು ಬರಗಾಲ ಘೋಷಣೆ ಮಾಡಿ ರೈತರ ಹೀತ ಕಾಯುವ ಕೆಲಸ ಜಿಲ್ಲೆಯ ಸಚಿವರುಗಳು ಸಂಸದರು ಮಾಡಬೇಕೆಂದು ರೈತ ಮುಖಂಡರುಗಳು ಆಗ್ರಹಿಸಿದ್ದಾರೆ. ಬೇಡಿಕೆಗಳ ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ್ ಅಶೋಕ ಕುಲಕರ್ಣಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಭೀಮಶೆಟ್ಟಿ ಮುರುಡ, ಗೋಪಾಲ ಪೋಲಕಪಳ್ಳಿ, ಸಚೀನ್ ಚ್ವಹಾಣ, ಸುಭಾಶ ಕೊಂಡ, ಹಣಮಂತ ಪೂಜಾರಿ, ಜಾಫರ್ ಖಾನ್ ಮಿರಿಯಾಣ, ಚೇತನ ಸುಲೇಪೇಟ, ಮಹೇಶ ರಾಣಾಪೂರ, ಶಿವಕುಮಾರ ಅಂಬಲ್ಗಿ ಅವರು ಸೇರಿದಂತೆ ರೈತಾಪಿ ವರ್ಗದ ರೈತ ಕೂಲಿಕಾರರು ಇದ್ದರು.