ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮೇಯರ ಯಲ್ಲಪ್ಪ ನಾಯ್ಕೋಡಿ ಸಲಹೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮೇಯರ ಯಲ್ಲಪ್ಪ ನಾಯ್ಕೋಡಿ ಸಲಹೆ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಮೇಯರ ಯಲ್ಲಪ್ಪ ನಾಯ್ಕೋಡಿ ಸಲಹೆ

ಕಲಬುರಗಿ: ಪಾಲಕರು ತಮ್ಮ ಕಷ್ಟ-ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಕಲಬುರಗಿ ಮಹಾನಗರ ಪಾಲಿಕೆ ಮೇಯರ ಯಲ್ಲಪ್ಪ ನಾಯ್ಕೋಡಿ ಅವರು ಅಭಿಪ್ರಾಯಪಟ್ಟರು.

                        ನಗರದ ಮಹಾತ್ಮಗಾಂಧಿ ಕಾಲೋನಿಯಲ್ಲಿ ಹಮ್ಮಿಕೊಂಡ ಮಹಾತ್ಮಗಾಂಧಿ ಮೂರ್ತಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದ ಅವರು,ನಗರ ಪ್ರದೇಶಗಳ ಹಿಂದುಳಿವಿಕೆಯಲ್ಲಿ ಶಿಕ್ಷಣದ ಕೊರತೆ ತೀವ್ರವಾಗಿದೆ. ಹೀಗಾಗಿ ಪಾಲಕರು ಮಕ್ಕಳನ್ನು ತಮ್ಮ ಸಂಕಷ್ಟ ನಿವಾರಣೆಗೆ ಬಳಸಿಕೊಳ್ಳದೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಮೂಲಕ ರಾಷ್ಟ್ರದ ಸಂಪತ್ತನ್ನಾಗಿ ಪರಿವರ್ತಿಸಬೇಕು ಎಂದರು.ಶ್ರೇಣಿಕೃತ ಸಮಾಜದಲ್ಲಿ ಸಮುದಾಯಗಳು ಅಭಿವೃದ್ಧಿ ಹೊಂದಬೇಕಾದರೆ ಶಿಕ್ಷಣ ಅವಶ್ಯಕ. ಹೀಗಾಗಿ ಪಾಲಕರು ತಮ್ಮ ಸಂಕಷ್ಟಗಳನ್ನು ಮಕ್ಕಳ ಕೊರಳಿಗೆ ಹಾಕದೆ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದರು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದರು.ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣ ನೀಡಿದಾಗ ಮಾತ್ರ ಕಲಿಕೆ ಸಾರ್ಥಕತೆ ಪಡೆದುಕೊಳ್ಳುತ್ತದೆ. ಬದಲಾಗಿ ಮಕ್ಕಳಿಗೆ ಮಿತ ಶಿಕ್ಷಣ ನೀಡುವುದರ ಮೂಲಕ ಮಕ್ಕಳ ಶೈಕ್ಷಣಿಕ ಉಜ್ವಲ ಭವಿಷ್ಯತ್ತಿಗೆ ಶ್ರಮಿಸಬೇಕು. ಮಕ್ಕಳ ವಯಸ್ಸಿಗೆ ಮೀರಿದ ಶಿಕ್ಷಣವನ್ನು ಬಲವಂತದಿಂದ ನೀಡಲು ಮುಂದಾದರೆ ಮಕ್ಕಳ ಬೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ.ಆದ್ದರಿಂದ ಮಕ್ಕಳ ಬೌದ್ಧಿಕ ಸಾಮರ್ಥ್ಯ ಅರಿತುಕೊಂಡು ಶಿಕ್ಷಣ ನೀಡುವುದು ಸೂಕ್ತ ಎಂದರು. 

            ಮಕ್ಕಳನ್ನು ಪಾಲಕರು ತಮ್ಮ ಕಷ್ಟಗಳ ನಿವಾರಣೆಗೆ ಬಳಸಿಕೊಂಡರೆ, ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಶೈಕ್ಷಣಿಕ ಪ್ರಗತಿ ಹೊಂದುವುದಿಲ್ಲ. ಹೀಗಾಗಿ ಪಾಲಕರು ಮಕ್ಕಳಿಗೆ ತಮ್ಮ ಕಷ್ಟಗಳನ್ನು ಬದಿಗಿಟ್ಟು ಶಿಕ್ಷಣ ಕೊಡಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಬೇಕು ಎಂದರು.

   ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಣಮಂತ ದೇವನೂರ ಮಾತನಾಡಿ,ನಮ್ಮ ಕಾಲೋನಿಗೆ ಏ‌ನೇ ಸಮಸ್ಯೆ ಇದ್ದರೂ ಮೇಯರ್ ಅವರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ನಮ್ಮ ಕಾಲೋನಿಯಲ್ಲಿರುವ ಮೂಲಭೂತ ಸೌಕರ್ಯಗಳಿಗೆ ಸ್ಪಂದಿಸುವುದಾಗಿ ಹೇಳಿದ್ದು, ಸಂತಸದ ವಿಷಯವಾಗಿದೆ ಎಂದು ಅವರು ಹೇಳಿದರು.

          ಈ ಸಂದರ್ಭದಲ್ಲಿ ಬಳ್ಳಾರಿಯ ಫಾದರ್ ಪ್ರ್ಯಾನಸಿಸ, ಅಶೋಕ ನಾಯಕ್,ಪ್ರಮೋದ ಕುಲಕರ್ಣಿ ಸೇರಿದಂತೆ ಇತರರು ಇದ್ದರು.