ಕಲ್ಯಾಣ ಪರ್ವಕ್ಕೆ ಬನ್ನಿ : ನಾಗೇಂದ್ರಪ್ಪ ನಿಂಬರಗಿ ಕರೆ
ಕಲ್ಯಾಣ ಪರ್ವಕ್ಕೆ ಬನ್ನಿ : ನಾಗೇಂದ್ರಪ್ಪ ನಿಂಬರಗಿ ಕರೆ
ಕಲಬುರಗಿ : ಬೀದರ್ ಜಿಲ್ಲೆ ಬಸವಕಲ್ಯಾಣದ ಬೇಗ್ ಸಭಾಮಂಟಪದಲ್ಲಿ ಅಕ್ಟೋಬರ್19 ರಿಂದ 20 ರವರೆಗೆ 2024 ರ
ಸ್ವಾಭಿಮಾನಿ ಕಲ್ಯಾಣ ಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ' ಎಂದು ರಾಷ್ಟ್ರೀಯ ಬಸವದಳದ ಕಲಬುರಗಿ ಜಿಲ್ಲಾಧ್ಯಕ್ಷ ನಾಗೇಂದ್ರಪ್ಪ ನಿಂಬರಗಿ ಹೆಳಿದರು.
ಗುರುವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲಿಂಗಾಯತ ಧರ್ಮ ಜಾಗೃತಿ, 770 ಶರಣರಿಗೆ ವಂದನೆ ಸಲ್ಲಿಸಲಾಗುವುದು. ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಎರಡು ದಿನಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಶನಿವಾರ ಧರ್ಮ ಚಿಂತನ ಗೋಷ್ಠಿ, ಯುವ ಗೋಷ್ಠಿ ಸೇರಿದಂತೆ ಹಲವರು ಕಾರ್ಯಕ್ರಮಗಳು ನಡೆಯಲಿವೆ.ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ ಬಂದಂತ ಶರಣ ಭಕ್ತರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ'ಎಂದು ಅವರು ಹೇಳಿದರು. ಜಗದೇವಿ ಛಟ್ಟಿ, ಜ್ಯೋತಿ ಕಟಾಳೆ, ಸಂತೋಷ ಕಟಾಳೆ, ಪ್ರಶಾಂತ ಕಟಾಳೆ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.