ಚಿಂಚೋಳಿ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ?

ಚಿಂಚೋಳಿ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ?

ಚಿಂಚೋಳಿ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ? 

ನಾಗೇಶ ಗುಣಾಜಿ, ಅಬ್ದುಲ್‌ ಬಾಷಿದ್‌, ಶರಣು ಪಾಟೀಲ್‌, ಜಗದೇವ ಗೌತಮ ಮಧ್ಯ ಪ್ರಬಲ ಪೈಪೋಟಿ

ಚಿಂಚೋಳಿ : ಇಂದು ಅ.27 ರಂದು ಪಟ್ಟಣದ ಶ್ರೀಚೆನ್ನ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಹಿನ್ನಲೆಯಲ್ಲಿ ಸಂಘಟನ ಸೃಜನ್ – 2 ಅಭಿಯಾನದ ನಿಮಿತ್ಯವಾಗಿ ಪಕ್ಷದ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದೆ. 

ನೂತನ ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಯುತ್ ಕಾಂಗ್ರೆಸ್ ತಾಲೂಕ ಅಧ್ಯಕ್ಷ ನಾಗೇಶ ಗುಣಾಜಿ ಮತ್ತು ಪುರಸಭೆ ಮಾಜಿ ಅಧ್ಯಕ್ಷ ಅಬ್ದುಲ್ ಬಾಷಿದ್ ಹಾಗೂ ಬ್ಲಾಕ್ ಕಾಂಗ್ರೆಸ್ ವಕ್ತಾರ ಶರಣು ಪಾಟೀಲ್ ಮೋತಕಪಳ್ಳಿ ಮತ್ತು ಬ್ಲಾಕ್ ಕಾಂಗೇಸ್ ಉಪಾಧ್ಯಕ್ಷ ಜಗದೇವ ಗೌತಮ್ ಅವರುಗಳ ಹೆಸರುಗಳು ಚರ್ಚೆಯ ಮುನ್ನಲೆಗೆ ಬಂದಿದ್ದು, ಆಕಾಂಕ್ಷಿಗಳ ಮಧ್ಯೆ ಪ್ರಬಲ ಪೈಪೋಟಿ ಏರ್ಪಟಿದೆ ಎನ್ನಲಾಗುತ್ತಿದೆ. 

ನಾಗೇಶ ಗುಣಾಜಿ ಅವರು ಕಳೆದ 20 ವರ್ಷಗಳಿಂದ ಕಾಂಗ್ರೇಸ್ ಪಕ್ಷದ ಗುರಿ ಸಿದ್ದಾಂತದ ತಳಹದಿಯ ಮೇಲೆ ಪಕ್ಷದ ಸಂಘಟನೆಗೆ ಒತ್ತು ನೀಡುತ್ತಾ ಬಂದಿರುತ್ತಾರೆ. ಕಾಂಗೇಸ್ ಪಕ್ಷದ ಚಿನ್ಹೆಯ ಮೇಲೆ ಸ್ಪರ್ಧಿಸಿದ ವಿಧಾನಸಭಾ ಮತ್ತು ಲೋಕಸಭಾ ಹಾಗೂ ಸ್ಥಳಿಯ ಚುನಾವಣೆಗಳು ನಡೆದ ಸಂದರ್ಭದಲ್ಲಿ ಅಭ್ಯರ್ಥಿಗಳ ಗೆಲುವಿಗೆ ಪಕ್ಷ ಕೊಟ್ಟ ಜವಬ್ದಾರಿಗಳು ನಿರ್ವಹಿಸಿದ್ದಾರೆ. ಚುನಾವಣೆಗಳ ಸಂದರ್ಭದಲ್ಲಿ ಅನ್ಯ ಪಕ್ಷಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರ ಕೆಲಸ ಮಾಡುವ ವ್ಯಕ್ತಿ ಎಂಬ ಹೆಸರಿಗೆ ನಾಗೇಶ ಗುಣಾಜಿ ಪಾತ್ರರಾಗಿದ್ದಾರೆ. ಇನ್ನೂ ಅಬ್ದುಲ್ ಬಾಷಿದ್ ಅವರು ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವ ಅವರು ಹೊಂದಿದ್ದಾರೆ. ಪಕ್ಷದ ನಾಯಕ ಮತ್ತು ಮುಖಂಡರೊಂದಿಗೆ ಒಳ್ಳೆಯ ನಿಕಟ ಸಂಬಂಧ ಇಟ್ಟುಕೊಂಡಿರುವ ವ್ಯಕ್ತಿ ಆಗಿದ್ದಾರೆ. ಬ್ಲಾಕ್ ವಕ್ತಾರಾಗಿ ಪಕ್ಷದ ಸೇವೆ ಸಲ್ಲಿಸುತ್ತಿರುವ ಶರಣು ಪಾಟೀಲ ಮೋತಕಪಳ್ಳಿ ಅವರು ಕಾನೂನು ಪದವಿಧರರಾಗಿದ್ದು, ಮುಖಂಡ ಸುಭಾಷ ರಾಠೋಡ ಹಾಗೂ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಒಳ್ಳೆಯ ನಿಕಟ ಸಂಬಂಧ ಹೊಂದಿದ್ದಾರೆ. ಪ್ರಸ್ತುತ ಬ್ಲಾಕ್ ಕಾಂಗ್ರೇಸ್ ಉಪಾ ಅಧ್ಯಕ್ಷರಾಗಿರುವ ಜಗದೇವ ಗೌತಮ್ ಅವರು ಕೂಡ ಜಿಲ್ಲೆಯ ನಾಯಕರೊಂದಿಗೆ ಒಳ್ಳೆಯ ಒಡನಾಟ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಬ್ಲಾಕ ಕಾಂಗ್ರೇಸ್ ಸ್ಥಾನಕ್ಕೆ ಪ್ರಬಲ್ ಪೈಪೋಟಿ ಏರ್ಪಟಿದ್ದು, ಈ ಹಿನ್ನಲೆಯಲ್ಲಿ ಅ. 27 ಮಂಗಳವಾರ ಜರುಗಲಿರುವ ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಬ್ಲಾಕ್ ಕಾಂಗೇಸ್ ಅಧ್ಯಕ್ಷ ಡಾ. ಕಿರಣ ದೇಶಮುಖ ಹಾಗೂ ಕೆಪಿಸಿಸಿ ಸಂಯೋಜಕರಾಗಿ ಮಾಜಿ ಶಾಸಕ ಅರವಿಂದಕುಮಾರ ಅರಳಿ ಅವರು ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. 

ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಪಕ್ಷದ ನಾಯಕರು ಹಾಗೂ ಮುಖಂಡರುಗಳು ಕಳೆದ 20 ವರ್ಷಗಳಿಂದ ವಿವಿಧ ಸಂಘಟನೆಯ ಕಾರ್ಯಗಾರಗಳಲ್ಲಿ ಭಾಗವಹಿಸಿ ಸಂಘಟನೆಯ ಜ್ಞಾನ ಹೊಂದಿರುವ ಮತ್ತು ಪಕ್ಷದ ಸಿದ್ದಾಂತ, ಗುರಿಗಳಿಗೆ ಬದ್ದರಾಗಿ ಪಕ್ಷ ಸೇವೆ ಸಲ್ಲಿಸುತ್ತಿರುವ ನಿಷ್ಠಾವಂತ ಕಾರ್ಯಕರ್ತ ನಾಗೇಶ ಗುಣಾಜಿ ಅವರ ಪಕ್ಷ ನಿಷ್ಠೆಗೆ ಪಕ್ಷ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗುರುತಿಸಿ ಆಯ್ಕೆಗೊಳಿಸುವವರೇ? ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಪಕ್ಷ ಕೈಗೊಳುವ ತಿರ್ಮಾನದಲ್ಲಿ ಅಡಗಿದೆ.