ಅಧಿಕಾರಿಗಳಿಂದಲೇ ಪ್ಲಾಸ್ಟಿಕ್ ವಸ್ತುಗಳು ಬಳಕೆಗೆ : ಪರಿಸರ ಪ್ರೇಮಿಗಳಿಂದ ಆಕ್ರೋಶ
72ನೇ ವನ್ಯಜೀವಿ ಸಪ್ತಾಹ : ಪ್ರಾಣಿಗಳ ಸಂರಕ್ಷಣೆಗೆ 10 ಕಿ.ಮೀ. ಕಾಲ್ನಡಿಗೆಗೆ ಹೆಜ್ಜೆ ಹಾಕಿದ ಎಸ್ಪಿ ಹಾಗೂ ಡಿಫಓ
ಪ್ಲಾಸ್ಟಿಕ್ ತ್ಯಜಿಸಿ, ಪ್ರಾಣಿ ಉಳಿಸಿ ಎಂದು ಹೇಳಿದ ಅಧಿಕಾರಿಗಳಿಂದಲೇ ಪ್ಲಾಸ್ಟಿಕ್ ವಸ್ತುಗಳು ಬಳಕೆಗೆ : ಪರಿಸರ ಪ್ರೇಮಿಗಳಿಂದ ಆಕ್ರೋಶ
ಚಿಂಚೋಳಿ : ಪ್ರಾದೇಶಿ ಅರಣ್ಯ ವಿಭಾಗ ಕಲಬುರಗಿ, ವನ್ಯಜೀವಿ ವಲಯ ಚಿಂಚೋಳಿ 72ನೇ ವನ್ಯಜೀವಿ ಸಪ್ತಾಹ 2026 ಕಾರ್ಯಕ್ರಮ ನಡೆಸಲಾಯಿತು.
ಸಪ್ತಾಹದ ಅಂಗವಾಗಿ ಪಟ್ಟಣದ ಚಂದಾಪೂರದ ಕರ್ನಾಟಕ ಪಬ್ಲಿಕ್ ಶಾಲೆಯಿಂದ ಚಂದ್ರಂಪಳ್ಳಿ ಅರಣ್ಯ ವನ್ಯಧಾಮದವರೆಗೆ 10 ಕಿ.ಮೀ ಕಾಲ್ನಡಿಗೆ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂಲು ಶ್ರೀನಿವಾಸ ಹಾಗೂ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಅಸೀಶರೆಡ್ಡಿ ಅವರು ಚಾಲನೆ ನೀಡಿ, ಪರಿಸರ ಪ್ರೇಮಿಗಳೊಂದಿಗೆ ಕಾಲ್ನಡಿಗೆಗೆ ಹೆಜ್ಜೆ ಹಾಕಿದರು. ಅರಣ್ಯ ಪರಿಸರ ವನ್ಯಜೀವಿಗಳ ಸಂರಕ್ಷಣೆಗೊಳಿಸುವ ಸಂದೇಶದ ಫಲಕಗಳು, ಅರಣ್ಯ ಪರಿಸರ ಮತ್ತು ವನ್ಯಜೀವಿಗಳ ಕುರಿತ ಮಾಹಿತಿ ಒದಗಿಸುವ ಕ್ಯೂಆರ್ ಕೋಡ್ ಗಳು ನಡಿಗೆಯ ಮೂಲಕ ಜಾಗೃತಿ ಫಲಕ ಪ್ರದರ್ಶಿಸಲಾಯಿತು. ಹುಲಿ, ಚಿರತೆಗಳಂತಹ ಕಾಡು ಪ್ರಾಣಿಗಳ ವೇಷಧಾರಿಗಳ ನೃತ್ಯಗಳು ಮತ್ತು ಸಾಂಪ್ರದಾಯಿಕ ಡೋಳು ಕುಣಿತ ವಾಕಥಾನ್ ಸಪ್ತಾಹ ಕಾರ್ಯಕ್ರಮಕ್ಕೆ ಮೆರಗು ತಂದು ಕೊಟ್ಟಿತ್ತು.
ಪರಿಸರ ಪ್ರೇಮಿಗಳ ಕಾಲ್ನಡಿಗೆಯ ದಾರಿಗಳ ಮಧ್ಯ ಶುದ್ಧ ಕುಡಿಯುವ ನೀರು, ಮಜ್ಜಿಗೆ, ಬಾಳೆ ಹಣ್ಣುಗಳ ಸೇವನೆಗೆ ಅಧಿಕಾರಿ ಸಂಜು ಚವ್ಹಾಣ ಅವರ ನೇತೃತ್ವದಲ್ಲಿ ಚಿಂಚೋಳಿ ವನ್ಯಜೀವಿ ಅರಣ್ಯ ಇಲಾಖೆ ವ್ಯವಸ್ಥೆ ಮಾಡಲಾಗಿತ್ತು.
ವನ್ಯಜೀವಿ ಪ್ರಾಣಿಗಳಿಗೆ ಹಾನಿಕಾರಕವಾಗು ಮತ್ತು ಹಾನಿಗೊಳಿಸುವ ಪ್ಲಾಸ್ಟಿಕ್ ಗಳು ಬಳಿಸವುದಿಲ್ಲವೆಂಬ ಪ್ರತಿಜ್ಞೆ ಬೋದನೆ ಕಾರ್ಯಕ್ರಮದಲ್ಲಿ ಮಾಡಲಾಯಿತು.
72ನೇ ಸಪ್ತಾಹ 2026 ವನ್ಯಜೀವಿ ಸಂರಕ್ಷಣೆಗಾಗಿ 10 ಕಿ.ಮೀ ಕಾಲ್ನಡಿಗೆಯಲ್ಲಿ ಐದುನೂರಕ್ಕು ಹೆಚ್ಚು ಪರಿಸರ ಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡಲೂ ಶ್ರೀನಿವಾಸ್, ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಅಸೀಶರೆಡ್ಡಿ, ಸಾಗರ ತಾವಡೆ, ಬಸವರಾಜ ಡಾಂಗೆ, ರೇಣುಕಾ, ಸುನೀಲ ಚವ್ಹಾಣ್, ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಇಓ ಸಂತೋಷ ಚವ್ಹಾಣ, ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಅವರು ಸೇರಿದಂತೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಮುಖಂಡರು, ವಕೀಲರು, ಪರಿಸರ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪರಿಸರ ಸಂರಕ್ಷಣೆಯ ಹೆಸರಲ್ಲಿ ಪರಿಸರ ಮಾಲಿನ್ಯ :
72ನೇ ವನ್ಯಜೀವಿ ಸಪ್ತಾಹದ ಹೆಸರಿನಲ್ಲಿ ನಡೆದ 10 ಕಿ.ಮೀ ಕಾಲ್ನಡಿಗೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅಡ್ಡಲೂ ಶ್ರೀನಿವಾಸ ಹಾಗೂ ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಆಸೀಶರೆಡ್ಡಿ ಅವರು ಚಾಲನೆ ನೀಡಿದ ಕಾರ್ಯಕ್ರಮಕ್ಕೆ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ, ಇಓ ಸಂತೋಷ ಚವ್ಹಾಣ ಸೇರಿ 500ಕ್ಕೂ ಹೆಚ್ಚು ಜನ ಪರಿಸರ ಪ್ರೇಮಿಗಳು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದ ದಾರಿಗಳ ಉದ್ದಕ್ಕೂ ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಗಳು, ನೀರಿನ ಬಾಟಲಿಗಳು ಬಿಸಾಡಿ ಸಂರಕ್ಷಣೆಯ ಹೆಸರಲ್ಲಿ ಅಧಿಕಾರಿಗಳೇ ಪರಿಸರ ಮಾಲಿನ್ಯವಾಗಲು ಪ್ರಮುಖ ಕಾರಣರಾಗಿದ್ದು, ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
• ಚಂದ್ರಂಪಳ್ಳಿ ವನ್ಯಜೀವಿ, ಜಲಾಶಯದವರೆಗೆ ನಡೆದ ವಾಕಥಾನ್ ನಡಿಗೆ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ತ್ಯಜಿಸಿ, ಪ್ರಾಣಿ ಉಳಿಸಿ ಎಂದು ಅರಣ್ಯ ಅಧಿಕಾರಿಗಳು ಪ್ರತಿಜ್ಞೆ ಬೋಧಿಸಲಾಗಿತ್ತು. ಬೋಧಿಸಿದ ಅಧಿಕಾರಿಗಳೇ ಪ್ಲಾಸ್ಟಿಕ್ ತಟ್ಟೆ, ಗ್ಲಾಸ್, ಬಾಟಲ್ ಗಳು ಅರಣ್ಯ ಪರಿಸರದಲ್ಲಿ ಬಿಸಾಡಿ ತೆರಳಿರುವುದು ಖಂಡನೀಯ. ಪ್ಲಾಸ್ಟಿಕ್ ಬೇಡ ಎನ್ನುವವರಿಂದಲೇ ಪ್ಲಾಸ್ಟಿಕ್ ಬಳಕೆ ಆಗಿರುವುದು “ಬೇಲಿಯೇ ಎದ್ದು ಹೋಲ ಮೇಯ್ದಂತೆ ಆಗಿದೆ.- ವೀರಭದ್ರಪ್ಪ ಚಂದ್ರಂಪಳ್ಳಿ, ಪರಿಸರ ಪ್ರೇಮಿ

