ನಮ್ಮ ನಡೆ ಕಲ್ಯಾಣ ಕಲಬುರಗಿ ಕಡೆ ಹೋರಾಟ ಯಶಸ್ವಿಗೆ ಅಭಿಶೇಕ ಬಾಲಾಜಿ ಮನವಿ

ನಮ್ಮ ನಡೆ ಕಲ್ಯಾಣ ಕಲಬುರಗಿ ಕಡೆ ಹೋರಾಟ ಯಶಸ್ವಿಗೆ ಅಭಿಶೇಕ ಬಾಲಾಜಿ ಮನವಿ

ನಮ್ಮ ನಡೆ ಕಲ್ಯಾಣ ಕಲಬುರಗಿ ಕಡೆ ಹೋರಾಟ ಯಶಸ್ವಿಗೆ ಅಭಿಶೇಕ ಬಾಲಾಜಿ ಮನವಿ

ಕಲಬುರಗಿ: ಜಿಲ್ಲೆಯ ಮಲ್ಲಾಬಾದ ಏತ ನೀರಾವರಿ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳು ಬೇಗನೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ನಾಳೆ ಶನಿವಾರ ಬೃಹತ್ ಪಾದಯಾತ್ರೆ ಮೂಲಕ ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದು.ಈ ಪಾದಯಾತ್ರೆಯೂ ಕರವೇ ರಾಜ್ಯಾಧ್ಯಕ್ಷ ಪ್ರವೀಣಕುಮಾರ ಶೆಟ್ಟಿ ಹಾಗೂ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ನೇತೃತ್ವದಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರವೇ ಸೇನಾನಿಗಳು ಕನ್ನಡಾಭಿಮಾನಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರವೇ(ಪ್ರವೀಣ ಶೆಟ್ಟಿ) ಬಣದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಶೇಕ ಬಾಲಾಜಿ ತಿಳಿಸಿದ್ದಾರೆ.

                ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಲಬುರಗಿ ಜಿಲ್ಲೆಯ ಸುಕ್ಷೇತ್ರ ದೇವಲ ಗಾಣಗಾಪೂರದ ದತ್ತಾತ್ರೇಯ ದೇವಾಲಯ ಹಾಗೂ ಭಾಗ್ಯವಂತಿ ದೇವಾಲಯ ಅಭಿವೃದ್ಧಿ ಹಾಗೂ ಜಿಲ್ಲೆಯಲ್ಲಿ 371 ವಿಧಿಯ ಉಪ ಸಚಿವಾಲಯದ ಘೋಷಣೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ಭಾಗದಲ್ಲಿ ಮಳೆ ಇಲ್ಲದೇ ರೈತರು ಕಂಗಲಾಗಿದ್ದು.ರಾಜ್ಯ ಸರಕಾರವು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪ್ರದೇಶ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂಬುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು.‌ಈ ಬೃಹತ್ ಪಾದಯಾತ್ರೆಗೆ ರೈತಪರ ಸಂಘಟನೆಗಳು, ಬುದ್ದಿ ಜೀವಿಗಳು,ಕರವೇ ಕಾರ್ಯಕರ್ತರು ಹಾಗೂ ಕರವೇ ಸೇನಾನಿಗಳು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿಕೊಂಡರು.