ಜೀವೇಶ್ವರ ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ.

ಜೀವೇಶ್ವರ ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ.

ಜೀವೇಶ್ವರ ಆದರ್ಶಗಳು ನಮಗೆಲ್ಲರಿಗೂ ಸ್ಪೂರ್ತಿ.

ಶಹಪುರ : ಭಗವಾನ್ ಶ್ರೀ ಜೇವೇಶ್ವರರ ಆದರ್ಶಗಳು ಸ್ಮರಿಸಲು ಇದು ಅತ್ಯಗತ್ಯ ದಿನವಾಗಿದೆ,ಅವರ ಆದರ್ಶ, ತತ್ವಗಳು,ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ ಎಂದು ಶ್ರೀಧರ ಕೆಂಧೊಳಿ ಹೇಳಿದರು.

ನಗರದ ಸ್ವಕುಳಸಾಳಿ ಸಮಾಜದ ವತಿಯಿಂದ ಆಯೋಜಿಸಿದ ಭಗವಾನ್ ಶ್ರೀ ಜಿವೇಶ್ವರ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಜೀವೆಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಮಾಜದ ಐಕ್ಯತೆ ಮತ್ತು ಸಂಸ್ಕೃತಿಯ ಪ್ರಚಾರ ಮಾಡಲು ಈ ಕಾರ್ಯಕ್ರಮ ಸೂಕ್ತ ಎಂದು ತಿಳಿಸಿದರು.

ನಂತರ ಮಹಿಳಾ ಮಂಡಳಿಯ ಸದಸ್ಯರು ಸಾಂಪ್ರದಾಯಕವಾಗಿ ತೊಟ್ಟಿಲೋತ್ಸವ ನಡೆಸಿಕೊಟ್ಟರು, ನಗರದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಜೊತೆಗೆ ಜೀವೇಶ್ವರ ಕಲ್ಯಾಣ ಮಂಟಪದ ಮುಖ್ಯ ವೇದಿಕೆಗೆ ತಲುಪಿತು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರು ಆಡಳಿತ ಮಂಡಳಿಯ ಸದಸ್ಯರು ಯುವಕರು ಮಹಿಳಾ ಮಂಡಳಿಯ ಸಮಸ್ತ ಸದಸ್ಯರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.