ಈಡಿಗ ಗುರುಗಳಾದ ಪ್ರಣವಾನಂದ ಶ್ರೀಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

ಈಡಿಗ ಗುರುಗಳಾದ ಪ್ರಣವಾನಂದ ಶ್ರೀಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

ಈಡಿಗ ಗುರುಗಳಾದ ಪ್ರಣವಾನಂದ ಶ್ರೀಗಳಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ

ಕಲಬುರಗಿ : ಜಗಜ್ಯೋತಿ ಬಸವೇಶ್ವರ 893ನೇ ಜಯಂತಿ ಪ್ರಯುಕ್ತ ಕಲಬುರಗಿಯ ಜಗತ್ತು ವೃತದಲ್ಲಿರುವ ಬಸವೇಶ್ವರರ ಮೂರ್ತಿಗೆ ಈಡಿಗ ಗುರುಗಳು ಹಾಗೂ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣಪುರು ಶಕ್ತಿ ಪೀಠದ ಡಾ.ಪ್ರಣವಾನಂದ ಸ್ವಾಮೀಜಿ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

  ಏಪ್ರಿಲ್ 20 ರಂದು ಡಾಕ್ಟರ್ ಪ್ರಣವಾನಂದ ಶ್ರೀಗಳು ಚಿಂಚೋಳಿ ತಾಲೂಕು ಸುಲೇಪೇಟದ ವಿಶ್ವಕರ್ಮ ಏಕದಂಡಗಿ ಮಠದ ಪೂಜ್ಯಶ್ರೀ ದೊಡ್ಡಂದ್ರ ಸ್ವಾಮಿಗಳ ಜೊತೆ ಬಸವೇಶ್ವರ ಮೂರ್ತಿಗೆ ಮಾಲಾಪಣೆ ಮಾಡಿ ಸಮ ಸಮಾಜ ಕಟ್ಟಲು ಬಯಸಿದ ಬಸವೇಶ್ವರರ ಚಿಂತನೆಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಶಾಂತಿ ಸಮೃದ್ಧಿಯ ರಾಷ್ಟ್ರಕಟ್ಟಲು ಕಂಕಣಬದ್ಧರಾಗ ಬೇಕೆಂದು ಡಾ. ಪ್ರಣವಾನಂದ ಶ್ರೀಗಳು ಸಂದೇಶ ನೀಡಿದರು.

   ಈ ಸಂದರ್ಭದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ. ಸತೀಶ್ ಹೊಸಮನಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಮಹೇಶ್ ಕಡೆಚೂರ್, ನಾಗಯ್ಯ ಗುತ್ತೇದಾರ್ ಮತ್ತಿತರರು ಜೊತೆಗಿದ್ದರು