ತೊಗಟವೀರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಬಲಪುರಿಗೆ ಪಿತೃ ವಿಯೋಗ
ತೊಗಟವೀರ ಸಮಾಜದ ಸಂಸ್ಥಾಪಕ ಅಧ್ಯಕ್ಷ ಶ್ರೀನಿವಾಸ್ ಬಲಪುರಿಗೆ ಪಿತೃ ವಿಯೋಗ
ಕಲಬುರಗಿ : ಜಿಲ್ಲಾ ತೊಗಟವೀರ ಸಮಾಜದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ್ ಬಲಪುರ ಅವರ ತಂದೆ ವಿಷ್ಣು ಹೃದಯ ಸ್ತಂಭನದಿಂದ ಬುಧವಾರ ಮಧ್ಯಾಹ್ನ 3 ಗಂಟೆ ನಿಧನರಾಗಿದ್ದು.ಧರ್ಮ ಪತ್ನಿ, ಮೂವರು ಮಕ್ಕಳು, ಮಾರಿಮಮ್ಮಕ್ಕಳು, ಹಾಗೂ ಅಪಾರ ಬಂಧು ಬಳಗ ಬಿಟ್ಟು ಅಗಲಿದ್ದಾರೆ
ತಮ್ಮ ನಿವಾಸದಲ್ಲಿ ಹೃದಯ ಸ್ತಂಭನ ಉಂಟಾಗಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂತ್ಯ ಕ್ರಿಯೆ ನಾಳೆ, 26.11.26 ರಂದು ಸ್ವಗ್ರಾಮ್, ತಿಮ್ಮಾಪುರ (ರಂಗಪೇಟ) ನಲ್ಲಿ ಜರಗುತ್ತದೆ ಎಂದು ತಿಳಿಸಿದ್ದಾರೆ
ಮೂಲತಃ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಮ್ಮಾಪುರ (ರಂಗಂಪೇಟ) ಗ್ರಾಮದವರಾದ ಇವರು, ಕಲಬುರಗಿಗೆ ಆಗಮಿಸಿ ರೇಡಿಯೋ ಮೆಕ್ಯಾನಿಕ್ ವೃತ್ತಿಯನ್ನು ಆರಂಭಿಸಿದ್ದರು. ಫೋರ್ಟ್ ರಸ್ತೆಯಲ್ಲಿ ತಮ್ಮ ಹೆಸರಿನಲ್ಲಿ 'ವಿಷ್ಣು ರೇಡಿಯೋ ರಿಪೇರ್' ಅಂಗಡಿ ಸ್ಥಾಪಿಸಿ, ಸತತ 45 ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ಜನಪ್ರಿಯರಾಗಿದ್ದರು.
ಕಳೆದ ಮೂರು ವರ್ಷಗಳ ಹಿಂದೆ ಕಲಬುರಗಿ ಜಿಲ್ಲಾ ತೊಗಟವೀರ ಸಮಾಜ ಸಂಘ ಸ್ಥಾಪನೆಗೆ ಮಾರ್ಗದರ್ಶನ ನೀಡಿ, ಮಹಾಪೋಷಕರಾಗಿ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ್ದರು.
ಅವರ ಅಕಾಲಿಕ ನಿಧನಕ್ಕೆ ಸಪ್ತ ನೇಕಾರರ ಸೇವಾ ಕೇಂದ್ರದ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

