ಆದಿಕವಿ ಮಹರ್ಷಿ ವಾಲ್ಮೀಕಿ

ಆದಿಕವಿ ಮಹರ್ಷಿ ವಾಲ್ಮೀಕಿ

ಆದಿಕವಿ ಮಹರ್ಷಿ ವಾಲ್ಮೀಕಿ

ಭಾರತದ ಪುಣ್ಯಭೂಮಿಯಲ್ಲಿ ಜನಿಸಿದ ಮಹಾತ್ಮರು,

ಜ್ಞಾನದ ಬೆಳಕನ್ನು ಜಗಕೆ ನೀಡಿದ ಮಹರ್ಷಿಗಳು,

ಸತ್ಯ ಧರ್ಮದ ಹಾದಿಯನ್ನು ತೋರಿದ ದಾರಿದೀಪ,

ಮಹರ್ಷಿ ವಾಲ್ಮೀಕಿ ಅವರು ನಮ್ಮೆಲ್ಲರಿಗೂ ಸ್ಫೂರ್ತಿ ರೂಪ!

ಆದಿಕವಿ ಎಂಬ ಬಿರುದನ್ನು ಪಡೆದ ಮಹಾನ್ ಋಷಿ,

ರಾಮಾಯಣ ಮಹಾಕಾವ್ಯದ ಅಮರ ಕವಿ,

ನೀತಿ, ಧರ್ಮ, ಪ್ರೀತಿಯ ಸಂದೇಶ ಸಾರಿದವರು,

ಮಾನವ ಕುಲದ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದವರು!

ಜೀವನವೆಂದರೆ ಬದಲಾವಣೆಯ ಸುಂದರ ಪಯಣ,

ಒಳ್ಳೆಯತನದಿಂದ ಬದಲಾಗುವುದು ಬದುಕಿನ ನಿಜವಾದ ಗುಣ,

ಹಿಂದಿನ ಬದುಕು ಹೇಗಿದ್ದರೂ ಬದಲಾವಣೆ ಸಾಧ್ಯ,

ಸತ್ಕರ್ಮದ ಹಾದಿಯಲ್ಲಿ ಸಾಗಿದರೆ ಬದುಕು ಸಾರ್ಥಕ!

ರತ್ನಾಕರನಿಂದ ವಾಲ್ಮೀಕಿಯಾದ ಮಹಾನ್ ಚೇತನ,

ತಪಸ್ಸಿನಿಂದ ಪಡೆದರು ಜ್ಞಾನದ ದಿವ್ಯ ದರ್ಶನ,

ತಪ್ಪಿನ ಹಾದಿ ಬಿಟ್ಟು ಸತ್ಯದ ಹಾದಿ ಹಿಡಿದರು,

ಜಗಕೆ ಆದರ್ಶವಾದ ಮಹರ್ಷಿಯಾಗಿ ಬೆಳೆದರು!

ಕಾಡಿನ ಶಾಂತ ವಾತಾವರಣದಲ್ಲಿ ತಪವನು ಗೈದು,

ಮನದೊಳಗಿನ ಅಜ್ಞಾನವ ಕಳೆಯುತ್ತ ಸಾಗಿಹರು,

ಧ್ಯಾನದಿಂದ ಜ್ಞಾನವ ಪಡೆದು ಪವಿತ್ರರಾದರು,

ಮಹರ್ಷಿ ಎಂಬ ಗೌರವಕ್ಕೆ ಪಾತ್ರರಾದರು!

ತಾಳ್ಮೆಯೇ ಶಕ್ತಿಯೆಂದು ಜಗಕೆ ತಿಳಿಸಿದರು,

ಸಾಧನೆಯಿಂದ ಗುರಿ ತಲುಪಲು ಕಲಿಸಿದರು,

ನಿಷ್ಠೆ ಮತ್ತು ಭಕ್ತಿಯ ಮಹತ್ವ ಸಾರಿದರು,

ಸನ್ಮಾರ್ಗದಲ್ಲಿ ನಡೆಯುವ ಪಾಠ ಕಲಿಸಿದರು!

ಶ್ರೀರಾಮನ ಜೀವನದ ಕಥೆಯನು ಹಾಡಿದರು,

ಸೀತೆಯ ಪಾವಿತ್ರ್ಯದ ಮಹಿಮೆಯನು ಸಾರಿದರು,

ಲಕ್ಷ್ಮಣನ ಸೇವೆಯ ಆದರ್ಶವ ತೋರಿದರು,

ಹನುಮಂತನ ಭಕ್ತಿಯ ಮಹತ್ವವ ತಿಳಿಸಿದರು!

ಅಯೋಧ್ಯೆಯ ಅರಸನ ಧರ್ಮದ ಕಥೆಯನು ಬರೆದು,

ಮಾನವ ಜೀವನದ ಮೌಲ್ಯಗಳನು ತಿಳಿಸಿ,

ಸತ್ಯ ಮತ್ತು ನ್ಯಾಯದ ಮಹತ್ವವನ್ನು ಸಾರಿದ,

ರಾಮಾಯಣವೆಂಬ ಮಹಾಕಾವ್ಯವ ಜಗಕೆ ನೀಡಿದ!

ಕಾವ್ಯಲೋಕದ ಮೊದಲ ಕವಿಯೆಂದು ಪ್ರಸಿದ್ಧರಾದರು,

ಸಂಸ್ಕೃತ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದರು,

ಶ್ಲೋಕಗಳ ಮೂಲಕ ಭಾವನೆಗಳಿಗೆ ಜೀವ ತುಂಬಿದರು,

ಸಾಹಿತ್ಯದ ಇತಿಹಾಸದಲ್ಲಿ ಅಜರಾಮರರಾದರು!

ವಾಲ್ಮೀಕಿಯ ಕಾವ್ಯವು ಜ್ಞಾನದ ಸಾಗರ,

ಅದರಲ್ಲಿದೆ ಜೀವನದ ಮೌಲ್ಯಗಳ ಭಂಡಾರ,

ಪೀಳಿಗೆಯಿಂದ ಪೀಳಿಗೆಗೆ ಹರಡುವ ಸಂಸ್ಕೃತಿ,

ಭಾರತದ ಹೆಮ್ಮೆಯಾದ ರಾಮಾಯಣದ ಮಹಾಕೀರ್ತಿ!

ಜಾತಿ ಮತಗಳ ಭೇದವ ಮರೆತು ಬಾಳೋಣ,

ಪ್ರೀತಿ ವಿಶ್ವಾಸದಿಂದ ಬದುಕನ್ನು ಕಟ್ಟೋಣ,

ಬಡವ ಬಲ್ಲಿದರೆಂಬ ಭೇದವ ತೊಡೆದು ಹಾಕೋಣ,

ಮಾನವೀಯತೆಯ ದೀಪವ ಎಲ್ಲೆಡೆ ಬೆಳಗಿಸೋಣ!

ತಪ್ಪು ಮಾಡಿದವರಿಗೂ ತಿದ್ದಿಕೊಳ್ಳುವ ಅವಕಾಶವಿದೆ,

ಒಳ್ಳೆಯ ದಾರಿಯಲ್ಲಿ ನಡೆಯಲು ಹೊಸ ಬದುಕಿದೆ,

ಶ್ರಮ ಮತ್ತು ಸಾಧನೆಯಿಂದ ಏರಬಹುದು ಎತ್ತರ,

ಒಳ್ಳೆಯ ಗುಣಗಳಿಂದಲೇ ಮನುಜನು ಆಗುವನು ಶ್ರೇಷ್ಠ!

ಸೀತೆಯ ತ್ಯಾಗದ ಕಥೆಯನು ಜಗಕೆ ತಿಳಿಸಿ,

ಕುಟುಂಬದ ಪ್ರೀತಿ, ನಿಷ್ಠೆಯ ಮೌಲ್ಯವ ಸಾರಿಸಿ,

ಪತಿ-ಪತ್ನಿಯ ಸಂಬಂಧದ ಕರ್ತವ್ಯ ತಿಳಿಸಿ,

ಜೀವನದ ಸವಾಲುಗಳನು ಎದುರಿಸುವ ಪಾಠ ಕಲಿಸಿ!

ಮಕ್ಕಳಿಗೆ ಸಂಸ್ಕಾರ, ಹಿರಿಯರಿಗೆ ಗೌರವ,

ಸಮಾಜದಲ್ಲಿ ಶಾಂತಿ, ಪ್ರೀತಿಯ ಸದ್ಭಾವ,

ಧರ್ಮದ ಹಾದಿಯಲ್ಲಿ ನಡೆಯುವ ಸಂಕಲ್ಪ,

ವಾಲ್ಮೀಕಿಯ ಸಂದೇಶದ ಅಮೂಲ್ಯ ನಿಲುವು!

ಕಾಲ ಬದಲಾದರೂ ನಿಮ್ಮ ಕೀರ್ತಿ ಅಳಿಯದು,

ನಿಮ್ಮ ಕಾವ್ಯದ ಮಹಿಮೆ ಎಂದಿಗೂ ಕುಂದದು,

ನಿಮ್ಮ ಜ್ಞಾನದ ಬೆಳಕು ಎಂದಿಗೂ ಆರದು,

ನಿಮ್ಮ ಆದರ್ಶದ ದಾರಿ ಎಂದಿಗೂ ಮರೆಯಾಗದು!

ನಿಮ್ಮ ಜೀವನ ನಮಗೆಲ್ಲ ಪ್ರೇರಣೆಯ ಸೆಲೆ,

ನಿಮ್ಮ ಕಾವ್ಯ ಜ್ಞಾನವೆಂಬ ಅಮೃತದ ಹೊಳೆ,

ನಿಮ್ಮ ಸಂದೇಶ ಮಾನವ ಕುಲದ ಆಸ್ತಿ,

ನಿಮ್ಮ ಹೆಸರು ಭಾರತದ ಹೆಮ್ಮೆಯ ಶಕ್ತಿ!

ಓ ಮಹರ್ಷಿ ವಾಲ್ಮೀಕಿ, ಜ್ಞಾನದ ಜ್ಯೋತಿ,

ನಿಮ್ಮ ಬದುಕು ನಮಗೆಲ್ಲ ಆದರ್ಶದ ಕೀರ್ತಿ,

ನಿಮ್ಮ ರಾಮಾಯಣ ಜಗಕೆ ಅಮೂಲ್ಯ ಕಾಣಿಕೆ,

ನಿಮ್ಮ ಪಾದಗಳಿಗೆ ನಮ್ಮ ಭಕ್ತಿಯ ಅರ್ಪಣೆ!

ನಿಮ್ಮ ತಪಸ್ಸಿನ ಶಕ್ತಿ ನಮ್ಮಲ್ಲಿ ಮೂಡಲಿ,

ನಿಮ್ಮ ಜ್ಞಾನದ ಬೆಳಕು ನಮ್ಮ ಬದುಕಲ್ಲಿ ಹರಡಲಿ,

ಸತ್ಯ, ಧರ್ಮ, ನ್ಯಾಯ ನಮ್ಮ ಜೀವನವಾಗಲಿ,

ಮಾನವೀಯತೆಯ ಭಾರತ ಜಗಕೆ ಮಾದರಿಯಾಗಲಿ!

ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ