ದೇಶದ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುವ ಆಚರಣೆಯ ಹಬ್ಬವೇ ದಸರಾ - ಶಿವರಾಜ ಅಂಡಗಿ

ದೇಶದ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುವ ಆಚರಣೆಯ ಹಬ್ಬವೇ ದಸರಾ  -	ಶಿವರಾಜ ಅಂಡಗಿ

ಎಂ.ಎ. ಟೆಂಗಳಿಕರ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ 

ದೇಶದ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುವ ಆಚರಣೆಯ ಹಬ್ಬವೇ ದಸರಾ - ಶಿವರಾಜ ಅಂಡಗಿ 

ಐಟಿ ಬಿಟಿ ವಿದೇಶಿ ತಿಂಡಿ ತಿನುಸುಗಳ ಉಡುಪು ಆಚರಣೆಗಳ ಆಕರ್ಷಣೆಯಿಂದ ನಮ್ಮ ಭಾರತೀಯ ಸಂಸ್ಕೃತಿ ಮರೆಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಭಾರತೀಯ ಹಬ್ಬಗಳು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯೊಂದಿಗೆ ಮಾನವೀಯ ಮೌಲ್ಯಗಳು ಮತ್ತು ಸಂಸ್ಕೃತಿಕ ಪರಂಪರೆಯನ್ನು ತಿಳಿಸುವ ಹಬ್ಬಗಳಲ್ಲಿ ದಸರಾ ದೊಡ್ಡ ಹಬ್ಬ, ಇವುಗಳ ಮಹತ್ವ ಇಂದಿನ ಯುವ ಪೀಳಿಗೆಗೆ ಮನವರಿಕೆ ಮಾಡಿಸುವುದು ಅತಿ ಅವಶ್ಯಕವಿದೆ ಎಂದು ಮಕ್ಕಳಿಗೆ ಪಠ್ಯದ ಓದುವಿನೊಂದಿಗೆ ಪಠ್ಯೇತರ ಚಟುವಟಿಕೆ ಹಬ್ಬ ಹರಿದಿನಗಳ ಮಹತ್ವ ಅಷ್ಟೇ ಪ್ರಮುಖವಾಗಿದೆ ಎಂದು ಟೆಂಗಳಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಮಾತನಾಡಿದರು. 

 ಸೂಪರ್ ಮಾರ್ಕೇಟನಲ್ಲಿ ಆದರ್ಶ ಮೆಡಿಕಲ್ ಎದುರುಗಡೆ ಇರುವ ಎಂ.ಎ. ಟೆಂಗಳಿಕರ್ ಕಂಪ್ಯೂಟರ್ ತರಬೇತಿ ಕೇಂದ್ರದ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ ಶಿವರಾಜ ಅಂಡಗಿರವರು ಅಕ್ಟೋಬರ್ ೧೧ ಅಂತರರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಇರುವುದರಿಂದ ಹೆಣ್ಣು ಮಕ್ಕಳಿಗೆ ವಿಶೇಷ ಮಾಹಿತಿ ಕೊಡಬೇಕೆಂದು ಒಂಭತ್ತು ಜನ ಹೆಣ್ಣುಮಕ್ಕಳಾದ ವಿಭಸ್ತು, ಶಾರದಾ, ಪಾರ್ಥಶಾರದೆ, ಅದ್ವಿತಿ, ಶ್ರೀಲಕ್ಷ್ಮಿ, ಶುಭಶ್ರೀ, ರೂಪಾ, ಮನು, ಕೃತಿಕಾ ಇವರೆಲ್ಲರಿಗೆ ಇಂದು ನವರಾತ್ರಿ ಹಬ್ಬ ಪ್ರಾರಂಭವಾದ ದಿನ ಚಾಮುಂಡೇಶ್ವರಿಯ ಶಕ್ತಿಯನ್ನು ಒಂಭತ್ತು ರೂಪದಲ್ಲಿ ಪೂಜಿಸುವ ಹಿನ್ನೆಲೆಯಲ್ಲಿ ಒಂಭತ್ತು ಮಹಿಳೆಯವರಿಗೆ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ, ಸಿದ್ದಿಧಾತ್ರಿ ಹೀಗೆ ಒಂಭತ್ತು ಭಾವಚಿತ್ರಗಳ ಜೊತೆಗೆ ಒಂದೊಂದು ಪೆನ್ ಕೊಡುವುದರ ಮೂಲಕ ನವರಾತ್ರಿ ಮೊದಲ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು. 

 ಕಾರ್ಯಕ್ರಮದಲ್ಲಿ ಶೋಭವರ್ಧನ್ ಟೆಂಗಳಿಕರ್, ಚಿತ್ರಲೇಖ ಟೆಂಗಳಿಕರ್, ಓಂಪ್ರಕಾಶ ಹೆಬ್ಬಾಳ, ರೇಖಾ ಅಂಡಗಿ, ಪ್ರಭು ಕಂಬಾರ, ರಾಜಶೇಖರ್ ಕಂಬಾರ, ಸಿದ್ದೇಶ ಹೆಬ್ಬಾಳ, ವಿನೋದಕುಮಾರ ಜನೇವರಿ, ಮನೋಜ ಕಂಬಾರ, ವಿಠ್ಠಲ್ ಕಂಬಾರ, ಲಿಂಗರಾಜ ಕಂಬಾರ, ಓಂಪ್ರಕಾಶ ಕಂಬಾರ, ಅನೀಲ ಕಂಬಾರ, ಹಾಗೂ ಇತರರು ಉಪಸ್ಥಿತರಿದ್ದರು.