ತಿಪ್ಪಣಪ್ಪ ಕಮಕನೂರ ಅವರಿಗೆ ಅವರ ಅಭಿಮಾನಿ ರಾಜ್ ನಾಗುರ್ ಅಭಿನಂದನೆ
ಸತತ ಮೂರನೇ ಬಾರಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣಪ್ಪ ಕಮಕನೂರ ಅವರಿಗೆ ಅವರ ಅಭಿಮಾನಿ ರಾಜ್ ನಾಗುರ್ ಅಭಿನಂದನೆ
ಕಲಬುರಗಿ : ಕರ್ನಾಟಕ ವಿಧಾನಪರಿಷತ್ತಿಗೆ ಸತತ ಮೂರನೇ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವ ಹಿರಿಯ ರಾಜಕೀಯ ಮುಖಂಡ ತಿಪ್ಪಣಪ್ಪ ಕಮಕನೂರು ಅವರಿಗೆ ಅವರ ಅಭಿಮಾನಿ ರಾಜ್ ನಾಗುರ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ ನಾಗುರ್, ತಿಪ್ಪಣಪ್ಪ ಕಮಕನೂರು ಅವರು ಜನಸೇವೆಗೆ ನೀಡಿರುವ ಕೊಡುಗೆ, ರಾಜಕೀಯ ಅನುಭವ ಹಾಗೂ ಸಾರ್ವಜನಿಕರ ವಿಶ್ವಾಸದ ಫಲವಾಗಿ ಮತ್ತೊಮ್ಮೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಅವರ ಈ ಸಾಧನೆ ರಾಜ್ಯದ ಅಭಿವೃದ್ಧಿಗೆ ಹಾಗೂ ಜನಪರ ಕಾರ್ಯಗಳಿಗೆ ಮತ್ತಷ್ಟು ಬಲ ತುಂಬಲಿದ್ದು, ಮುಂದಿನ ದಿನಗಳಲ್ಲಿ ಸಹ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲಿ ಎಂದು ಶುಭ ಹಾರೈಸಿದರು.
ತಿಪ್ಪಣಪ್ಪ ಕಮಕನೂರು ಅವರ ಮುಂದಿನ ಅವಧಿಯ ಕಾರ್ಯಚಟುವಟಿಕೆಗಳು ಯಶಸ್ವಿಯಾಗಲಿ ಎಂದು ರಾಜ್ ಅವರು ಪ್ರಕಟಣೆಯ ಮೂಲಕ ಶುಭಾಶಯಗಳನ್ನು ತಿಳಿಸಿದರು.
