ಡಿಸೆಂಬರ್ 10 ರಂದು ಬೆಳಗಾವಿ ಚಲೋ - ಕೂಡಲಸಂಗಮ ಶ್ರೀ

ಡಿಸೆಂಬರ್ 10 ರಂದು ಬೆಳಗಾವಿ ಚಲೋ - ಕೂಡಲಸಂಗಮ ಶ್ರೀ

ಡಿಸೆಂಬರ್ 10 ರಂದು ಬೆಳಗಾವಿ ಚಲೋ - ಕೂಡಲಸಂಗಮ ಶ್ರೀ

ಶಹಾಪುರ : ಪಂಚಮಸಾಲಿ, ಮಲೇಗೌಡ,ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತ 2ಎ ಮತ್ತು ಲಿಂಗಾಯಿತ ಉಪಜಾತಿಗಳಿಗೆ ಒಬಿಸಿ ಮೀಸಲಾತಿ ಹಕ್ಕೊತ್ತಾಯಿಸಿ,ಬರುವ ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ನಗರದ ದೇಶಮುಖ ಬಡಾವಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪಂಚಮಸಾಲಿಗಳ ನಡಿಗೆ ಬೆಳಗಾವಿಯ ಸತ್ಯಾಗ್ರಹದ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,2024 ಡಿಸೆಂಬರ್ 10 ರಂದು ಬೃಹತ್ ಮೀಸಲಾತಿ ಹೋರಾಟ ಹಮ್ಮಿಕೊಂಡಿರುವ ಸಂದರ್ಭದಲ್ಲಿ ಲಿಂಗಾಯಿತರ ಮೇಲೆ ಮಾರಣಾಂತಿಕ ದೌರ್ಜನ್ಯ ನಡೆಸಲಾಗಿತ್ತು,ಲಿಂಗಾಯಿತರ ಮೇಲಿನ ದೌರ್ಜನ್ಯ ದಿನದ ಎರಡನೇ ವರ್ಷದ ನೆನಪಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು, ಯುವಕರು,ಭಾಗವಹಿಸಬೇಕೆಂದು ವಿನಂತಿಸಿಕೊಂಡರು.

ಬಸವಣ್ಣನ ಕಾಲದಲ್ಲಿ ಕೊಂಡಿ ಮಂಚಣ್ಣನಂತವರು,ಚೆನ್ನಮ್ಮನ ಕಾಲದಲ್ಲಿ ಬ್ರಿಟಿಷರು ಅದೇ ರೀತಿಯಾಗಿ ಇವತ್ತು ಮೀಸಲಾತಿ ಪಡೆಯುವುದರಲ್ಲಿ ನಮ್ಮರೆ ನಮಗೆ ಶತ್ರುಗಳಾಗಿ ಕಾಡುತ್ತಿದ್ದಾರೆ, ಗೆ ಕಾಲವೇ ತಕ್ಕ ಉತ್ತರ ನೀಡುತ್ತದೆ, ಗಾಗಿ ನಾವೆಲ್ಲರೂ ಕಾಯಬೇಕು ಎಂದು ನುಡಿದರು.ಆದರೆ ನಮ್ಮ ಸಮಾಜ ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಮಾಜ ಸಂಘಟನೆ ಅವಶ್ಯಕ,ನಮ್ಮ ಸಮಾಜದ ಹೋರಾಟದ ಶಕ್ತಿ ಸರಕಾರಕ್ಕೆ ತೋರಿಸಬೇಕು,ನಾವು ಕೇಳಿರುವ ಮೀಸಲಾತಿ ನೀಡಲೇಬೇಕು ಒಂದು ವೇಳೆ ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.

ಪ್ರತಿ ಗ್ರಾಮಗಳಲ್ಲೂ ಸಂಘಟನೆ ಬಲಪಡಿಸಬೇಕು ಮತ್ತು ನಮ್ಮ ಸಮಾಜದ ಜನರಿಗೆ ಜನಜಾಗ್ರತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡಿ,ಸಮಾಜ ಕಟ್ಟುವ ಕೆಲಸ ಮಾಡಬೇಕು ಸಮಾಜ ಜನರಿಗೆ ಸ್ಪಂದಿಸಿ ಸಹಕಾರ ನೀಡಿದಾಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನುಡಿದರು,ಈ ಸಂದರ್ಭದಲ್ಲಿ ಲಿಂಗಾಯಿತ ಪಂಚಮಸಾಲಿ ಸಮಾಜದ ಯುವ ಮುಖಂಡರಾದ ದೇವೇಂದ್ರಪ್ಪ ತೋಟಿಗೆರ,ಲಿಂಗಾಯಿತ ಪಂಚಮಸಾಲಿ ಘಟಕದ ತಾಲೂಕು ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ಹೊಸೂರು,ಶರಣು ಹೊಸೂರ ಮಲ್ಲಿಕಾರ್ಜುನ್ ಆವಂಟಿ,ಸಿದ್ದಣ್ಣ ಸಾಸನೂರ, ಭೀಮರಾಯ ಗೋಡೆಕಾರ, ಭೀಮರಾಯ ಈರಣ್ಣನವರ, ಭೀಮರಾಯ ಹುರಸಗುಂಡಗಿ ಸೇರಿದಂತೆ ಇತರರು ಭಾಗವಹಿಸಿದ್ದರು.