ಕೆಲಸದಿಂದ ಜನ ಮೆಚ್ಚುಗೆ ಪಡೆದ ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ವರ್ಗಾವಣೆ ವಲ್ಲದ ಮನಸ್ಸಿನಿಂದ ಸಹೃದಯಿ ಅಧಿಕಾರಿಗೆ ಬೀಳ್ಕೊಡುಗೆ ನೀಡಿದ ಗ್ರೇಡ್ -1 ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ
ಕೆಲಸದಿಂದ ಜನ ಮೆಚ್ಚುಗೆ ಪಡೆದ ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ವರ್ಗಾವಣೆ
ವಲ್ಲದ ಮನಸ್ಸಿನಿಂದ ಸಹೃದಯಿ ಅಧಿಕಾರಿಗೆ ಬೀಳ್ಕೊಡುಗೆ ನೀಡಿದ ಗ್ರೇಡ್ -1 ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ
ಚಿಂಚೋಳಿ : ಗ್ರೇಡ್ - 2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರನ್ನು ತಾಲ್ಲೂಕಿನಲ್ಲಿದ್ದು ವಿವಿಧ ಇಲಾಖೆಗಳ ಜವಾಬ್ದಾರಿ ವಹಿಸಿಕೊಂಡು 25 ವರ್ಷಗಳ ಕಾಲ ಸಾರ್ವಜನಿಕರಿಗೆ ಉತ್ತಮವಾದ ಸರಕಾರಿ ಸೇವೆ ನೀಡಿದ್ದಾರೆ. ಅವರ ಸೇವೆ ತಾಲೂಕಿನ ಜನರ ಪ್ರೀತಿ - ಪಾತ್ರಕ್ಕೆ ಹೆಸರಾಗಿದ್ದಾರೆ. ಇಂತಹ ಒಳ್ಳೆಯ ಸಹೃದಯಿ ಅಧಿಕಾರಿಯನ್ನು ಇಲಾಖೆಯಿಂದ ವರ್ಗಾವಣೆಗೊಳುತ್ತಿರುವುದು ಬೇಸರ ತಂದಿದೆ ಎಂದು ಗ್ರೇಡ್ 1 ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.
ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಅವರು ಕಮಲಾಪೂರ ತಾಲೂಕಿಗೆ ವರ್ಗಾವಣೆಗೊಂಡಿರುವ ಹಿನ್ನಲೆಯಲ್ಲಿ ಇಲಾಖೆಯಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿನ ಯಾವುದೇ ಜವಾಬ್ದಾರಿ ವಹಿಸಿದರು ಅಚ್ಚು ಕಟ್ಟಾಗಿ ಶಾಂತ ಸ್ವಭಾವದಿಂದ ಎಲ್ಲಾ ಕೆಲಸಗಳು ಮಾಡಿ ಮುಗಿಸುವ ಮೂಲಕ ಇಲಾಖೆಗಯ ಮೆಚ್ಚುಗೆಗೆ ಗ್ರೇಡ್ -2 ತಹಸೀಲ್ದಾರ್ ವೆಂಕಟೇಶ ದುಗ್ಗನ್ ಪಾತ್ರರಾಗಿದ್ದರು . ಇಂತಹ ಶಾಂತ ಸ್ವಭಾವ ಹೊಂದಿದ್ದ ವ್ಯಕ್ತಿ ಇಲಾಖೆಯಿಂದ ವರ್ಗಾವಣೆಗೊಳ್ಳುತ್ತಿರುವುದು. ಇಲಾಖೆಗೆ ಅತೀವ ಬೇಸರತಂದಿದೆ. ವೆಂಕಟೇಶ ದುಗ್ಗನ್ ಅವರ ಸೇವೆ ಮತ್ತು ಮೃದು ವ್ಯಕ್ತಿತ್ವದ ಸ್ವಭಾವ ಹೀಗೆ ಮುಂದು ವರೆಸಿಕೊಂಡು ಹೋಗಬೇಕು. ಇನ್ನೂ ಹೆಚ್ಚಿನ ಸಂಖ್ಯೆಯ ಜನರ ಹೃದಯದಲ್ಲಿ ನೆಲೆಸಿರುವಂತೆ ಉತ್ತಮ ಆರೋಗ್ಯದ ಶಕ್ತಿ ದೇವರು ಕರುಣಿಸಲಿ ಎಂದು ಶುಭ ಹಾರೈಕೆಯೊಂದಿಗೆ ಭಾರವಾದ ವಲ್ಲದ ಮನಸ್ಸಿನಿಂದ ಸಹೃದಯಿ ದುಗ್ಗನ್ ಅವರಿಗೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರು ಆತ್ಮೀಯ ಬೀಳ್ಕೊಡುಗೆ ನೀಡಿದರು.
ಇದಕ್ಕೂ ಮುಂಚಿತವಾಗಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹೊಳ್ಕರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಮಂತ ಕಟ್ಟಿಮನಿ, ಕೆ. ಎಂ. ಬಾರಿ, ಮಲ್ಲಿಕಾರ್ಜುನ್ ಪಲಾಮೂರ್, ಅಮರ ಲೋಡ್ನೂರ್, ಮಾರುತಿ ಗಂಜಗಿರಿ, ಗೌತಮ ಬೊಮ್ಮನಹಳ್ಳಿ ಅವರು ಮಾತನಾಡಿ, ವೆಂಕಟೇಶ ದುಗ್ಗನ್ ಅವರುಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಜನರ ಮನಸ್ಸಿನಲ್ಲಿ ಸದಾ ನೆನಪಾಗಿರಲಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಇಲಾಖೆಯ ಸಿಬ್ಬಂದಿ ವರ್ಗ ದವರು, ರಾಜಕೀಯ ಮುಖಂಡರು, ಸಂಘಟನೆಗಳ ಮುಖಂಡರು ಇದ್ದರು.

