ಹೊಳೆಸಮುದ್ರ ಗ್ರಾಮದಲ್ಲಿ ಕಾವಡಿ ಯಾತ್ರೆ
ಹೊಳೆಸಮುದ್ರ ಗ್ರಾಮದಲ್ಲಿ ಕಾವಡಿ ಯಾತ್ರೆ
ಕಮಲನಗರ: ತಾಲೂಕಿನ ಹೊಳಸಮುದ್ರ ಗ್ರಾಮದಲ್ಲಿ ಇಂದು ನಸುಕಿನಲ್ಲಿ ಮಹಿಳೆಯರು ಬಾಲಕರು ಬಾಲಕಿಯರು ಪುರುಷರು ಸ್ತ್ರೀಯರಲ್ಲ ಶಿವಭಕ್ತರಾದವರು ಸೇರಿಕೊಂಡು ಊರ ಹೊರ ಇರುವ ಗಂಗೆ ನದಿಗೆ ಹೋಗಿ ಗಂಗೆ ಜಲವನ್ನು ತೆಗೆದುಕೊಂಡು ಕೇಸರಿ ಬಣ್ಣದ ಬಟ್ಟೆ ಧರಿಸಿ ಶಿವಭಕ್ತರಾದವರೆಲ್ಲ ಹೊತ್ತುಕೊಂಡು ಬರಿಗಾಲ್ಲಿನಿಂದ ದಾರಿ ಉದ್ದಕ್ಕೂ ನಡೆದು ಕೊಂಡು ಹರ.. ಹರ..... ಶಂಕರ,ಜಯ.. ಜಯ....ಶಂಕರ ಎಂದು ಜೈ ಘೋಷ ಹಾಕುತ್ತಾ ಶಿವಮಂದಿರಕ್ಕೆ ಬಂದರು.
ಶಿವಮಂದಿರದಲ್ಲಿರುವ ಶಿವಮೂರ್ತಿಗೆ ನೀರಿನಿಂದ ಅಭಿಷೇಕ ಮಾಡಿದರು.
ಈ ಕಾವಡಿಯು ತೆಳುವಾದ ಮರದ ಹಲಗೆಯನ್ನು ಅರ್ದಚಂದ್ರಾಕಾರದಲ್ಲಿ ಕಮಾನಿನಂತೆ ಬಾಗಿಸಿದ್ದು, ಕಾವಡಿಯ ಕೆಳಭಾಗದಲ್ಲಿ ದುಂಡಾಗಿ ಜೋಡಿಸಿ ಕಾವಡಿಯನ್ನು ಸಿದ್ದಪಡಿಸಿರುತ್ತಾರೆ. ಕಮಾನಿನ ಮೇಲು ಭಾಗವನ್ನು ನವಿಲುಗರಿಗಳಿಂದ ಅಲಂಕರಿಸಲಾಗಿರುತ್ತದೆ. ಕಾವಟಿಯನ್ನು ತಲೆಯ ಮೇಲಿಟ್ಟುಕೊಂಡು ಎರಡೂ ಕೈಗಳ ಸಹಾಯವಿಲ್ಲದೆ ಭುಜ, ಎದೆ ಮತ್ತು ತಲೆಯ ಮೇಲೆ ಆಡಿಸುತ್ತಾ ಉತ್ಸಾಹವು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸಿದರು.
ಈ ಭಕ್ತರೆಲ್ಲರೂ ಶ್ರಾವಣ ಮಾಸದಲ್ಲಿ ಉಪವಾಸವಿದ್ದು ಸ್ನಾನ, ಮಡಿ ಮಾಡಿ ಮನಶುದ್ದದಿಂದ ಆಚರಿಸುವ ಸಂಪ್ರದಾಯ ಇದಾಗಿದೆ.
ಇದರಿಂದ ಪ್ರತಿಯೊಬ್ಬರಲ್ಲಿ ಭಕ್ತಿ ಭಾವವನ್ನು ಹುಟ್ಟಿಕೊಳ್ಳುವುದರೊಂದಿಗೆ ಶಿವನಿಗೆ ಒಲಿಸುವ ಶ್ರಾವಣ ಮಾಸದಲ್ಲಿ ಇಂತಹ ಕಾರ್ಯಗಳು ಗ್ರಾಮೀಣ ಭಾಗದಲ್ಲದೆ ಪ್ರತಿಯೊಂದು ಪ್ರದೇಶದಲ್ಲಿ ನಡೆಯುವಂಥದ್ದು ನೆನಪಿಸಿಕೊಳ್ಳಬಹುದು.

