"ಹರಿಪ್ರಸಾದ್ 'ವಿಧಾನ ಸೌಧದಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿ
"ಹರಿಪ್ರಸಾದ್ 'ವಿಧಾನ ಸೌಧದಲ್ಲಿ ದಕ್ಷ ಪ್ರಾಮಾಣಿಕ ಅಧಿಕಾರಿ
ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಬೇರೆ ಬೇರೆ ಉದ್ದೇಶಕ್ಕಾಗಿ ಭೇಟಿ ನೀಡುವ ಸಾವಿರಾರು ಸಾರ್ವಜನಿಕರಿಗೆ ಕರ್ನಾಟಕ ಸರ್ಕಾರ ಸಚಿವಾಲಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸ್ವಾಗತ ಕೇಂದ್ರ-ಪೂರ್ವ ದ್ವಾರ ಇಲ್ಲಿ ಪ್ರಸ್ತುತ ಕೆ.ಏ.ಎಸ್ ದರ್ಜೆ ತತ್ಸಮಾನವಾದ ಹುದ್ದೆಯಲ್ಲಿ (ಸಚಿವಾಲಯ ವೃಂದ ಮತ್ತು ನೇಮಕಾತಿ ನಿಯಮಗಳನ್ನವಯ ಶೇಕಡ 25% ರಷ್ಟು ಶಾಖಾಧಿಕಾರಿ ಹುದ್ದೆಗಳನ್ನು ಕೆಎಎಸ್ ಮೂಲಕ ನೇರ ನೇಮಕಾತಿಯಲ್ಲಿ ತುಂಬಲಾಗುತ್ತದೆ & 75% ಮುಂಬಡ್ತಿಯಿಂದ ತುಂಬಲಾಗುತ್ತದೆ) ಕರ್ತವ್ಯ ನಿರ್ವಹಿಸುತ್ತಿರುವ ಸಾತ್ವಿಕತೆಯಿರುವ ಮಾನವೀಯ ಮೌಲ್ಯಗಳುಳ್ಳ ಶಾಂತ ಸ್ವಭಾವದ ಶ್ರೀ ಹರಿಪ್ರಸಾದ್ ರವರು HP sir ಎಂದೇ ಪ್ರಸಿದ್ಧವಾಗಿರುವ ಓರ್ವ ದಕ್ಷ ಪ್ರಾಮಾಣಿಕ ಅಧಿಕಾರಿಯಿದ್ದು ಇವರ ಪರಿಚಯ ಇಲ್ಲದೇ ಇರುವ ಸಾರ್ವಜನಿಕರು ಇಲ್ಲವೇ ಇಲ್ಲ ಎಂದೇಳಬಹುದು. ರಾಜ್ಯದ ಶಕ್ತಿಕೇಂದ್ರವಾದ ವಿಧಾನ ಸೌಧದಲ್ಲಿ ಯಾವುದೇ ತರಹದ ಆಮಿಷಗಳಿಗೆ ಒಳಗಾಗದೇ ತುಂಬಾ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೆಲವೇ ಕೆಲವು ಅತ್ಯಂತ ದಕ್ಷ ಪ್ರಾಮಾಣಿಕ ಅಧಿಕಾರಿಗಳ ಪೈಕಿ ಇವರು ಒಬ್ಬರಾಗಿದ್ದು ಓರ್ವ ವಿಶಿಷ್ಟವಾದ ಸ್ವಾವಲಂಬಿ ಮತ್ತು ಮಹಾನ್ ಸ್ವಾಭಿಮಾನಿ ಅಧಿಕಾರಿ. ಸರ್ಕಾರದ ವಿವಿಧ ಮಂತ್ರಿಗಳ ಆಪ್ತಕಾರ್ಯದರ್ಶಿಗಳು ತಮ್ಮ ಮಂತ್ರಿಗಳ ಹಿಂಬಾಲಕರನ್ನು ತಮ್ಮ ಕಛೇರಿಗಳಿಗೆ ಕಳುಹಿಸಲು ಕೂಡಲೇ ಸಂಪರ್ಕಿಸುವುದೇ ಈ ಅಧಿಕಾರಿಯನ್ನು ಮತ್ತು ಸ್ವಾಗತಕೇಂದ್ರಕ್ಕೆ ಬರುವ ಮಂತ್ರಿಗಳ ಮತ್ತು ಶಾಸಕರ ಇನ್ನೂ ಕೆಲವು ಹಿಂಬಾಲಕರು ನೇರ ಶಾಸಕರಿಗೆ ಮತ್ತು ಮಂತ್ರಿಗಳಿಗೆ ದೂರವಾಣಿ ಕರೆಮಾಡಿ ಈ ಅಧಿಕಾರಿಗೆ ಮೊಬೈಲನ್ನು ನೀಡಿಬಿಡುತ್ತಾರೆ.
ಶ್ರೀ ಹರಿಪ್ರಸಾದ್ ರವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗುಳ್ಳಹಳ್ಳಿ ಗ್ರಾಮದಲ್ಲಿ ದಿನಾಂಕ: 25-05-1984 ರಲ್ಲಿ ಒಂದು ಸಾಮಾನ್ಯ ರೈತಾಪಿ ಕುಟುಂಬದಲ್ಲಿ ಜನಿಸಿ 2010 ರಲ್ಲಿ KPSC ಯ ಮೂಲಕ ಕರ್ನಾಟಕ ಸರ್ಕಾರ ಸಚಿವಾಲಯ ಸೇವೆಗೆ ಆಯ್ಕೆಗೊಂಡು ಸಚಿವಾಲಯದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಸದರಿ ಅಧಿಕಾರಿಯವರ ವ್ಯಕ್ತಿತ್ವವನ್ನು ಸೂಕ್ಷವಾಗಿ ಅವಲೋಕಿಸುವುದಾದರೆ ಇವರು ಬಹಳ ಸೌಮ್ಯ ಸ್ವಭಾವುಳ್ಳವರಾಗಿದ್ದು ಮಾನವೀಯತೆ, ಸನ್ಮಾರ್ಗದ ಜೀವನ ಮತ್ತು ನೈತಿಕ ಮೌಲ್ಯಗಳ ಮಹತ್ವವರಿತಿರುವ ಸಹೃದಯಿ ಹಾಗೂ ಕರುಣಾಮಯಿ ವ್ಯಕ್ತಿತ್ವದವರಾಗಿರುತ್ತಾರೆ. ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಬೇರೆ ಬೇರೆ ಉದ್ದೇಶಕ್ಕಾಗಿ ಭೇಟಿ ನೀಡುವ ಸಾವಿರಾರು ಸಾರ್ವಜನಿಕರಿಗೆ ಒಳಪ್ರವೇಶಿಸಲು ಅನುಕೂಲಕರವಾದ ರೀತಿಯಲ್ಲಿ ವಿಧಾನ ಸೌಧ-ವಿಕಾಸ ಸೌಧದ ಮುಂಬಾಗವಿರುವ ಸ್ವಾಗತ ಕೇಂದ್ರ-ಪೂರ್ವ ದ್ವಾರ ಕಛೇರಿಯ ವಾತಾವರಣವನ್ನು ಸಂಪೂರ್ಣವಾಗಿ ಪರಿವರ್ತಿಸಿರುವ ಆಡಳಿತ ಕ್ರಿಯಾತ್ಮಕ ವ್ಯಕ್ತಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಸಹಾಯ ಕೋರಿ ಶಾಸಕರ ಮತ್ತು ಮಂತ್ರಿಗಳ ಪತ್ರಗಳನ್ನಿಡಿದು ದಿನನಿತ್ಯ ಬರುವ ಶಸ್ತ್ರ ಚಿಕಿತ್ಸೆ ಒಳಗಾಗಿರುವ ರೋಗಿಗಳು, ಪ್ರವಾಹ ಸಂತೃಸ್ತರು, ಬರಸಂತೃಸ್ತರನ್ನು ಗುರುತಿಸಿ ಸಾರ್ವಜನಿಕರ ಭೇಟಿ ಸಮಯ ಮದ್ಯಾಹ್ನ 2.30 ನಿಗಧಿಗೊಳಿಸಿದರೂ ಸಹ ಅವರ ವಿವೇಚನಾಧಿಕಾರ ಬಳಸಿ ಕೂಡಲೇ ಅವರನ್ನು ಓಳಗೆ ಪ್ರವೇಶಿಸಲು ಅವಕಾಶ ಮಾಡಿಕೊಡುವ ಮೂಲಕ ಮತ್ತು ಅಂಗವಿಕಲರು, ತುಂಬಾ ವಯೋ ವೃದ್ಧರಿಗೂ ಸಹ ಅವರಿಗೆ ತಕ್ಷಣವೇ ಒಳ ಪ್ರವೇಶಿಸಲು ಅನುಮತಿ ನೀಡುವುದರೊಂದಿಗೆ ನೂರಾರು ಜನರಿಗೆ ಪ್ರತಿನಿತ್ಯ ಸಹಾಯ ಮಾಡುತ್ತಿದ್ದಾರೆ. ತಮ್ಮ ಕಛೇರಿಯ ಸಿಬ್ಬಂದಿಗೂ ಸಹ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಜರುಗಿಸುವುದಾಗಿ ಕಛೇರಿಯ ತಮ್ಮ ಸಿಬ್ಬಂದಿಗೆ ನಿರ್ದೇಶನ ನೀಡಿ ಟಿಪ್ಪಣಿ ಹೊರಡಿಸಿರುತ್ತಾರೆ. ಅಲ್ಲದೇ ಈ ಅಧಿಕಾರಿಯು ತನ್ನ ಸಂಬಳದ ಹಣದಲ್ಲಿಯೇ ತಮ್ಮ ಕೈಲಾದಷ್ಟು ಹಣವನ್ನು ಧಾನ ಮಾಡುವ ಪ್ರವೃತ್ತಿ ಹೊಂದಿದ್ದು ಕೆಲವು ವೃದ್ಧಾಶ್ರಮಗಳು & ಅನಾಥಶ್ರಮಗಳನ್ನು ನಡೆಸುತ್ತಿರುವ NGO ಗಳಿಗೆ ಅಲ್ಪ ಸ್ವಲ್ಪ ಹಣವನ್ನು ನೀಡುವರು ಹಾಗೂ ತಮ್ಮ ಫೇಸ್ಬುಕ್ ಮೂಲಕ ಬೇರೆಯವರಿಗೂ ಇದರ ಬಗ್ಗೆ ಪ್ರೇರೇಪಿಸುತ್ತಿದ್ದಾರೆ.
ಇವರಿಗೆ ಶಾಖಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದುವ ಪೂರ್ವದಲ್ಲಿ ರಾಜ್ಯಪಾಲರ ಸಚಿವಾಲಯದ ವಿಶ್ವವಿದ್ಯಾಲಯ ಶಾಖೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆಯಿದ್ದು ಇವರು ಸದಾ ಜ್ಞಾನಾರ್ಜನೆಗೆ ಸದಾ ತುಡಿಯುತ್ತಿರುತ್ತಾರೆ. ಇವರ ಬಿಡುವಿನ ಸಮಯಲ್ಲಿ ವಿಧಾನ ಸೌಧದಲ್ಲಿನ ಗ್ರಂಥಾಲಯದಲ್ಲಿ ಇವರು ಪುಸ್ತಕಗಳನ್ನು ಅಧ್ಯಯನ ಮಾಡುತ್ತಿರುವುದನ್ನು ಎಷ್ಟೋ ಸಾರಿ ಗಮನಿಸಿರುತ್ತೇನೆ. ರಾಜ್ಯಪಾಲರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಂದ ಬರುತ್ತಿದ್ದ Statutes & Regulations ಗಳನ್ನು ಇವರು ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆಯನ್ವಯ ಕೂಲಂಕಷವಾಗಿ ಪರಿಶೀಲಿಸಿ ರಾಜ್ಯಪಾಲರ ಅನುಮೋದನೆ ಪಡೆಯುವ ಪ್ರಕ್ರಿಯೆಲ್ಲಿ ಬಹಳ ಮಹತ್ತರ ಪಾತ್ರವನ್ನು ವಹಿಸುತಿದ್ದರು. ಈ ಅಧಿಕಾರಿಯು ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಾದ Mysore University, Vishweshwariah Technical University, Rajiv Gandhi Univeristy of Health Scienses, Bengaluru Agricultural University ಗಳಿಂದ ಬರುತ್ತಿದ್ದ Draft Statutes & Regulations ಗಳನ್ನು ರಾಜ್ಯಪಾಲರಿಗೆ ಕನ್ನಡ ಭಾಷೆಯು ಬರದೇ ಇರುವುದರಿಂದ English ಭಾಷೆಯಲ್ಲಿ ಮಂಡಿಸಿ ಯಾವುದೇ corrections ಇಲ್ಲದೇ ಇವರು ಸಲ್ಲಿಸುತ್ತಿದ್ದ ಪ್ರಸ್ತಾವನೆಗಳು ಮೇಲಧಿಕಾರಿಳಿಂದ ಅನುಮೋದನೆಗೊಂಡು ನಂತರ ರಾಜ್ಯಪಾಲರಿಂದ ಅಂಗೀಕಾರಗೊಳ್ಳುತ್ತಿದ್ದವೆಂಬುದು ನಮ್ಮ ಪತ್ರಿಕೆಯ ತಿಳಿದು ಬಂದಿರುತ್ತದೆ. ಅಲ್ಲದೇ 2020-23 ರವರೆಗೆ ಸಚಿಲಾಯದಲ್ಲಿ ನಿವಾಸಿ ಅಧಿಕಾರಿಯಾಗಿ ನಿರ್ವಹಿಸಿದ್ದ ಶ್ರೀ. ಹರಿಪ್ರಸಾದ್‌ರವರು ಬೆಂಗಳೂರ ಕಮಿಷನರ್ ಆಫ್ ಪೋಲೀಸ್ ಮತ್ತು ಡಿಜಿ ಐಜಿಪಿ ಯವರಿಂದ ಬರುತ್ತಿದ್ದ ರಾಜ್ಯಕ್ಕೆ ಸಂಭದಿಸಿದ ಕೆಲವು ಪ್ರಮುಖ ಗೌಪ್ಯ ಮಾಹಿತಿಗಳನ್ನು ಸರ್ಕಾರದ ಮುಖ್ಯಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಯವರಿಗೆ, ಗೃಹಮಂತ್ರಿಯವರ ಆಪ್ತ ಕಾರ್ಯದರ್ಶಿಯವರಿಗೆ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯವರಿಗೆ ಹಗಲುರಾತ್ರಿಯೆನ್ನದೇ ಸರಿಯಾದ ಸಮಯಕ್ಕೆ ತಲುಪಿಸುವ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಇದೇ ಕರ್ತವ್ಯವಧಿಯಲ್ಲಿ ರಾಜ್ಯಕ್ಕೆ ಆಗಮಿಸುತ್ತಿದ್ದ ಅಕ್ಕಪಕ್ಕ ರಾಜ್ಯದ ರಾಜ್ಯಪಾಲರು, ಕೇಂದ್ರ ಮತ್ತು ಪಕ್ಕದ ರಾಜ್ಯ ಮಂತ್ರಿಗಳು, ಇನ್ನಿತರೇ ವರಿಷ್ಟರುಗಳ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಿಮಾನನಿಲ್ದಾಣದ ಅಧಿಕಾರಿಗಳೊಡನೆ ಉತ್ತಮ ಸಮನ್ವಯತೆ ಜವಬ್ದಾರಿಯನ್ನು ಸಹ ಉತ್ತಮ ರೀತಿಯಲ್ಲಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.
ಪ್ರಸ್ತುತ ಈ ಅಧಿಕಾರಿಯು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸ್ವಾಗತ ಕೇಂದ್ರ-ಪೂರ್ವ ದ್ವಾರ ಶಾಖೆಯ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇದೊಂದು ಬಹಳ ಕ್ಲಿಷ್ಟಕರವಾದ ಜವಬ್ದಾರಿಯೆಂದು ಹೇಳಬಹುದು. ಏಕೆಂದರೆ ಈ ಸ್ವಾಗತಕೇಂದ್ರವು ಬೇರೆ ಬೇರೆ ಕೆಲಸಗಳಿಗಾಗಿ ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಪ್ರವೇಶಿಸಲು ಸಾಲಿನಲ್ಲಿ ಬರುವ ಸಾರ್ವಜನಿಕರಿಗೆ ಆದ್ಯತೆಯ ಮೇಲೆ ಪಾಸುಗಳನ್ನು ವಿತರಿಸುವ ಸವಾಲಿನ ಕಠಿಣವಾದ ಕರ್ತವ್ಯವಾಗಿರುತ್ತದೆ. ಈ ಕಛೇರಿಯಲಿ ಸಾರ್ವಜನಿಕರು ರಾಜ್ಯದ ದೂರ ದೂರದ ಸ್ಥಳಗಳಿಂದ ಇಲ್ಲಿಗೆ ಬಂದು ಸರತಿಯಲ್ಲಿ ನಿಂತು ಪಾಸುಗಳನ್ನು ಪಡೆಯುವುದರಿಂದ ಗಲಾಟೆ ಘರ್ಷಣೆಗಳು ನಡೆಯುತ್ತಿರುತ್ತವೆ. ಆದುದರಿಂದ ಪ್ರತಿದಿನ ಪೋಲೀಸರ ಕಾವಲಿನೊಂದಿಗೆ ಪಾಸುಗಳನ್ನು ವಿತರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹಲವು ಭಾರಿ ಹೆಚ್ಚುವರಿಯಾಗಿ ಹೊಯ್ಸಳ ಪೋಲೀಸನ್ನು ಸ್ಥಳಕ್ಕೆ ಕರೆಸಿ ಹರಿಪ್ರಸಾದ್ ಸರ್ ಜನರನ್ನ ನಿಯಂತ್ರಿಸಿರುವ ಉದಾಹರಣೆಗಳಿವೆ. ಅಲ್ಲದೇ ಇತ್ತೀಚಿಗೆ ಪಾಸುಗಳನ್ನು ವಿತರಿಸುವ ಪ್ರಕ್ರಿಯೆಯನ್ನು digitalise ಮಾಡಿದ್ದು Online ನಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬೇಕಾಗಿದ್ದು ಹಲವು ಬಾರಿ OTP, Server ಸಮಸ್ಯೆ, QR Code ಸಮಸ್ಯೆಗಳು ಉಂಟಾಗುತ್ತಿದ್ದು ಹರಿಪ್ರಸಾದ್‌ರವರು ತಾಂತ್ರಿಕ ಸಿಬ್ಬಂದಿಗಳ ಮೂಲಕ ಕೂಡಲೇ ಸಮಸ್ಯೆಗಳನ್ನು ನಿವಾರಿಸಿ ಸಾರ್ವಜನಿಕರಿಗೆ ಆನ್‌ಲೈನ್ ಸೌಲಭ್ಯದ ಬಗ್ಗೆ ಜಾಗೃತಿ ಮೂಡಿಸುವ ಕರ್ತವ್ಯವನ್ನು ಅತ್ಯಂತ ದಕ್ಷತೆಯಿಂದ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್, ಹೇಮಂತ್, ಮರಿಲಿಂಗಯ್ಯ, ಶ್ಯಾಮ್, ಮಂಜು, ರವೀಶ್ ಮತ್ತು ಕೌಸಲ್ಯ ಇತ್ಯಾದಿಯವರು ಒಂದು ತಂಡದಂತೆ ಉತ್ತಮವಾಗಿ ಕರ್ತವ್ಯನಿರ್ವಹಿಸುತ್ತಿದ್ದು ಈ ಅಧಿಕಾರಿಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತಿದ್ದಾರೆ.
ಈ ಅಧಿಕಾರಿಯ ಹಲವು ಸಹುದ್ಯೋಗಿಗಳು, ಸ್ನೇಹಿತರು ಬೇರೆ ಬೇರೆ ಕ್ಷೇತ್ರೀಯ ಇಲಾಖೆಗಳಲ್ಲಿ ನಗರ ಸಭೆಯ Commissioner, ನಿಗಮಗಳ MD post, General Manager, Tahashildar post, Assistant Director post, PS & Special Officers to Ministers etc ಹೀಗೆ ಅನುಕೂಲಕರ ಹುದ್ದೆಗಳಿಗೆ ನಿಯೋಜನೆ ಮೇಲೆ ತೆರಳುತ್ತಿದ್ದಾರೆ ಹಾಗೂ ಸಚಿವಾಲಯದಲ್ಲಿನ ಅನುಕೂಲಕರ ಜಾಗಗಳಲ್ಲಿ ವರ್ಗಾವಣೆ ಮಾಡಿಸಿಕೊಂಡು ಹಲವು ಪ್ರಯೋಜನಗಳನ್ನು ಪಡೆಯುತ್ತಿದ್ದರೂ ಸಹ ಇವರು ಮಾತ್ರ ಯಾವುದೇ ದುರಾಸೆಗೆ ಓಳಗಾಗದೇ ಎಲ್ಲೆಲ್ಲಿ ಸ್ಥಳನಿಯುಕ್ತಿಗೊಳಿಸಲಾಗುತ್ತಿದೆಯೋ ಆ ಜಾಗಗಳಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದು ಎಲ್ಲರಿಗೂ ಆದರ್ಶನೀಯ. ಇವರಿಗೆ ಮುಂದೆ ಒಂದೆರೆಡು ವರ್ಷಗಳಲ್ಲಿ ಸರ್ಕಾರದ ಅಧಿನ ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ಹೊಂದಲಿದ್ದು, ಇವರ ಸೇವೆಯನ್ನು ಸರ್ಕಾರವು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಿ ಹಾಗೂ ಇವರಿಗೆ ಇನ್ನೂ ಒಳ್ಳೆಯ ಉನ್ನತ ಹುದ್ದೆಗಳು ಲಭಿಸಲಿ ಎಂಬುದು ನಮ್ಮ ಪತ್ರಿಕೆಯ ಆರೈಕೆ. ಭೃಷ್ಟಾಚಾರದ ಬಗ್ಗೆ ಇವರಿಗೆ ತುಂಬಾ ಅಸಮಧಾನ ಇದ್ದು ಸಮಾಜವು ಭೃಷ್ಟತೆಯಿಂದ ಹಾಗೂ ಕೆಟ್ಟಮಾರ್ಗದಿಂದ ಹಣ ಸಂಪಾಸಿದವರನ್ನು ಗೌರವಿಸುವುದನ್ನು ನಿಲ್ಲಿಸಿ ಪ್ರಾಮಾಣಿಕವಾಗಿ ಬದುಕು ನಡೆಸುತ್ತಿರುವವರನ್ನು ಗೌರವಿಸಿದರೆ ಭೃಷ್ಟಾಚಾರವನ್ನು ಕ್ರಮೇಣವಾಗಿ ಕಡಿಮೆ ಮಾಡಬಹುದೆಂದು ತಮ್ಮ ಅಭಿಪ್ರಾಯ ವ್ಕಕ್ತ ಪಡಿಸುತ್ತಾರೆ. ಹಾಗೂ ಸಮಾಜದಲ್ಲಿ ಭೃಷ್ಟರಾಜಕಾರಣಿಗಳಿಂದ ಹೆಚ್ಚಿನ ಯುವಕರು ಹಾದಿ ತಪ್ಪಿದ್ದು ದಿನ ಬೆಳಗಾದರೆ ಬಿಳಿ ಬಟ್ಟೆಗಳನ್ನು ಧರಿಸಿಕೊಂಡು ಇಲ್ಲದ ರಾಜಕೀಯ ಗೀಳಂಟಿಸಿಕೊಂಡು ಪ್ರಮುಖ ರಾಜಕಾರಣಿಳು ಇವರ ಜೇಬಿನಲ್ಲೇ ಇರುವಂತೆ ಭ್ರಮಿಸಿ ಭವಿಷ್ಯದ ಬಗ್ಗೆ ಭ್ರಮಿಸುತ್ತಾ ಸಿಕ್ಕಸಿಕ್ಕವರೆನ್ನೆಲ್ಲಾ ತಮಗೆ ಮತ ಚಲಾಯಿಸುವರೆಂಬ ಕಲ್ಪನೆಯಲ್ಲಿ ಅವರ ಹಿತೈಷಿಯಂತೆ ಸುಳ್ಳು-ಪೊಳ್ಳುಮಿಶ್ರಿತ ನಟನೆ ಮಾಡಿ ಜನರನ್ನ ಮೇಲ್ಬಿದ್ದು ಮಾತನಾಡಿಸುತ್ತಿರುವ ಯುವಕರ ನಡೆಯ ಬಗ್ಗೆ ಈ ಅಧಿಕಾರಿಯು ನೋವು ವ್ಯಕ್ತಪಡಿಸುತ್ತಾರೆ. ಯುವಕರು ತಮ್ಮ ಕುಟುಂಬವೃತ್ತಿಗಳನ್ನೇ ಮರೆತು ಮೈಗಳ್ಳರಾಗಿ ರಾಜಕಾರಣಿಗಳ ಹಿಂದೆ ಹಿಂದೆ ಅಲೆಯುತ್ತಿರುವುದನ್ನು ಇವರು ಸಹಿಸುವುದಿಲ್ಲ ಈ ಯುವಕರ ಗುಂಪುಗಳನ್ನು MLA ಗಳು ತಮ್ಮ ಬೆಂಬಲಿಗರಂತೆ ಬಿಂಬಿಸಿಕೊಂಡು ಜನರಿಗೆ ಸೇರಬೇಕಾದ ಹಣದ ಪಿಕ್‌ಪಾಕೆಟ್ ಕಳ್ಳದಂಧೆ & ವಂಚನೆಯಲ್ಲಿ ತೊಡಗಿದ್ದಾರೆಂದು ಬೇಸರ ವ್ಯಕ್ತಪಡಿಸುತ್ತಾರೆ. ಇಂತಹ ಸಹೃದಯಿ ಅಧಿಕಾರಿಗೆ ನಮ್ಮ ಪತ್ರಿಕೆಯು ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುವುದರೊಂದಿಗೆ ದೇವರು ಎಲ್ಲಾ ರೀತಿಯಲ್ಲಿಯೂ ಒಳ್ಳೆಯದನ್ನುಂಟುಮಾಡಲಿ ಎಂದು ನಮ್ಮ ಪತ್ರಿಕೆಯು ಹಾರೈಸುತ್ತದೆ.