ಎಂಟು ತಿಂಗಳಿನಿಂದ ಸಗರ ಗ್ರಾಂ.ಪಂ.ಸಿಬ್ಬಂದಿಗಿಲ್ಲ ಸಂಬಳ.

ಎಂಟು ತಿಂಗಳಿನಿಂದ ಸಗರ ಗ್ರಾಂ.ಪಂ.ಸಿಬ್ಬಂದಿಗಿಲ್ಲ ಸಂಬಳ. ಶಹಪುರ : ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆ ಅಲ್ಲದೆ ನಮಗೆ 8 ತಿಂಗಳಿನಿಂದ ಸಂಬಳ ನೀಡಿಲ್ಲ ಎಂದು ಸಗರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ ತೆರಿಗೆ ಸಂಗ್ರಹದಲ್ಲಿ ಶೇ% 40 ರಷ್ಟು ಹಣವನ್ನು ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಸರಕಾರ ಆದೇಶವಿದ್ದರೂ, ಪಂಚಾಯಿತಿ ಅಧಿಕಾರಿಗಳು ಆದೇಶ ಪಾಲನೆ ಮಾಡುತ್ತಿಲ್ಲ, ಇದರಿಂದ ನಮ್ಮ ಕುಟುಂಬ ನಿರ್ವಹಣೆಗೆ ತುಂಬಾ ತೊಂದರೆಯಾಗುತ್ತಿದೆ,ಈ ವಿಷಯದ ಕುರಿತು ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ ಎಂದು ಅಸಮಾಧಾನ ತೋಡಿಕೊಂಡರು. ಗ್ರಾಮ ಪಂಚಾಯಿತಿಗೆ ಅನುದಾನ ಬಿಡುಗಡೆಯಲ್ಲಿ ವಿಳಂಬ,ಕನಿಷ್ಠ ವೇತನ ಜಾರಿಯಲ್ಲಿ ಗೊಂದಲ, ಪಂಚತಂತ್ರ 2.0 ಮತ್ತು ತಾಂತ್ರಿಕ ಸಮಸ್ಯೆ,ಸ್ಥಳೀಯ ಸಂಪನ್ಮೂಲಗಳ ಕೊರತೆ ಹಾಗೂ ಇನ್ನಿತರ ಸಮಸ್ಯೆಗಳಿಂದಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸಂಬಳ ಸಿಗದಿರಲು ಪ್ರಮುಖ ಕಾರಣಗಳು ಒಂದೆಡೆಯಾದರೆ, ಗ್ರಾಮ ಪಂಚಾಯಿತಿಗೆ ಬಂದ ಅನುದಾನ ಹಾಗೂ ತೆರಿಗೆ ಸಂಗ್ರಹ ಹಣವನ್ನು ಖಾಲಿ ಮಾಡಿ ನುಂಗಿ ನೀರು ಕುಡಿದಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರು ತಮ್ಮ ಅಳಲನ್ನು ತೋಡಿಕೊಂಡರು. ಗ್ರಾಮ ಪಂಚಾಯಿತಿಯಲ್ಲಿ ಕಸಗುಡಿಸುವರು,ಚರಂಡಿ ಸ್ವಚ್ಛ ಮಾಡುವವರು,ಬಿಲ್ ಕಲೆಕ್ಟರ್, ಪಂಪ್ ಆಪರೇಟರ್, ಕಂಪ್ಯೂಟರ್ ಆಪರೇಟರ್, ಸೇರಿದಂತೆ ಇನ್ನಿತರ ಕೆಳ ಹಂತದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ವೇತನ ಇಲ್ಲದೆ ಯಾತನೆ ಅನುಭವಿಸುವಂತಾಗಿದೆ.ಅವರ ಗೋಳು ಯಾರೂ ಕೇಳುವರಿಲ್ಲ, ಕಳೆದ ಮಾರ್ಚ್ ತಿಂಗಳಿನಿಂದ ಇಲ್ಲಿಯವರೆಗೂ ವೇತನ ನೀಡಿಲ್ಲ.ನಾವು ಜೀವನ ಸಾಗಿಸುವುದಾದರೂ ಹೇಗೆ ಎಂಬುದು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕಾಗಿದೆ. ನಾವು ಕೆಲಸ ಮಾಡಿದರು ನಮಗೆ ಸಂಬಳ ನೀಡುತ್ತಿಲ್ಲ,ಮಕ್ಕಳ ಶಾಲಾ ಫೀಸ್ ಕಟ್ಟಲು ನಮ್ಮತ್ತಿರ ಹಣವಿಲ್ಲ,ದಯವಿಟ್ಟು ನಮಗೆ ಸಂಬಳ ಕೊಡಿಸಿ ಎಂದು ಕರ್ನಾಟಕ ಪಂಚಾಯತ್ ರಾಜ್ಯ ಆಯುಕ್ತಾಲಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾನ್ಯ ಆಯುಕ್ತರಿಗೆ ಮನವಿ ಮಾಡಿ ಅಂಗಲಾಚಿ ಬೇಡಿಕೊಂಡರು. ಕೋಟ್ - 1. 14 ನೇ ಹಣಕಾಸು ಯೋಜನೆಯಲ್ಲಿ ಹಾಗೂ ತೆರಿಗೆ ಸಂಗ್ರಹದಲ್ಲಿ ಶೇ 40% ರಷ್ಟು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ವೇತನ ನೀಡಲು ವಿನಿಯೋಗಿಸಿಕೊಳ್ಳಬೇಕೆಂದು ಸರಕಾರದ ಆದೇಶವಿದ್ದರೂ ಪಿಡಿಒ ಹಾಗೂ ಕಾರ್ಯದರ್ಶಿಗಳು ಪಾಲನೆ ಮಾಡುತ್ತಿಲ್ಲ,ಗ್ರಾಮ ಪಂಚಾಯಿತಿಗೆ ಬಂದ ಅನುದಾನವು ಖಾಲಿ,ತೆರಿಗೆ ಸಂಗ್ರಹ ಹಣವನ್ನು ಖಾಲಿ ಮಾಡಿ ನುಂಗಿ ನೀರು ಕುಡಿದಿದ್ದಾರೆ. ಹೆಸರು ಹೇಳಲಿಚ್ಚಿಸದ ಗ್ರಾಮ ಪಂಚಾಯತ್ ಸಿಬ್ಬಂದಿ