ನೀರಿಗಾಗಿ ರೈತರ ಹೋರಾಟ ನಾಗರಾಳ ಜಲಾಶಯ ನೀರು ಬಿಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ನೀರಿಗಾಗಿ ರೈತರ ಹೋರಾಟ ನಾಗರಾಳ ಜಲಾಶಯ ನೀರು ಬಿಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ

ನೀರಿಗಾಗಿ ರೈತರ ಹೋರಾಟ ನಾಗರಾಳ ಜಲಾಶಯ ನೀರು ಬಿಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ 

ಚಿಂಚೋಳಿ : ನಾಗರಾಳ್ ಕೆರೆ ಕೆಳದಂಡೆ ಲೋಹರ್ ಮುಲ್ಲಾಮಾರಿ (ಡ್ಯಾಮ್ ) ಕೆಳಭಾಗದ ರೈತರಿಗೆ ನೀರು ಬಿಡುವಂತೆ ಕೋರಿ ಚಿಮ್ಮನಚೋಡ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕಾರ್ಯಾಲಯದ ಎದುರುಗಡೆ ರೈತರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿಕೊಂಡಿದೆ. ಕುರಿ- ಮೇಕೆ ಮತ್ತು ಜಾನುವಾರಗಳಿಗೆ ಕುಡಿಯಲು ನದಿಗಳಲ್ಲಿ ನೀರು ಸಿಗುತ್ತಿಲ್ಲ. ಆಡಳಿತ ಮೌನವಹಿಸಿರುವುದು ಏಕೆ ? ಎಂದು ಪ್ರಶ್ನೆಸಿದ್ದಾರೆ. 

 ತಾಲೂಕಿನ ರೈತರ ಜೀವನಾಡಿ ಕೆರೆ ನಾಗರಾಳ ಡ್ಯಾಮ್ ಜಲಾಶಯದಿoದ ನೀರು ಬಿಟ್ಟರೆ ರೈತರಿಗೆ ಅನುಕೂಲವಾಗಲಿದೆ. 

  ಸಧ್ಯ ಮಳೆ ಇಲ್ಲದೆ

ಬೆಳೆಗಳು ಸಂಪೂರ್ಣ

ಒಣಗಿ ಹೋಗುತ್ತಿವೆ. ನೀರಿಲ್ಲದೆ ಹಾಗೂ ಜಾನುವಾರುಗಳು ಕೂಡ ಪರದಾಡುವ ಸ್ಥಿತಿಯನ್ನು ಗಮನಿಸದೇ ಇರುವ ಅಧಿಕಾರಿಗಳು ಈ ಭಾಗಕ್ಕೆ ಸಿಕ್ಕಿರುವುದೇ ದುರ್ದೈವ ? ಕೂಡಲೇ ಕೆರೆಯ ನೀರನ್ನು ಬಿಟ್ಟು ಕೃಷಿ ಬೆಳೆಗೆ ಮತ್ತು ರೈತರಿಗೆ ಅನುಕೂಲ ಮಾಡಿ ಕೊಡಬೇಕು. ಕನಕಪುರ ಗ್ರಾಮದ ಬ್ರಿಜ್ ಕಮ್ ಬ್ಯಾರೇಜ್ ಗೆ ಹಾಕಿರುವ ಗೇಟಗಳನ್ನು ತೆರವುಗೊಳಿಸಬೇಕು. ಗಾರಂಪಳ್ಳಿ ಕ್ರಾಸ್ ಬಳಿ ಕೇನಲ್ ಕಾಲುವೆ ಅರ್ಧ ಮರ್ಧ ಮಾಡಿ ಮುಗಿಸಿ ಹೋಗಿರುವ ಗುತ್ತಿಗೆದಾರರ ಲೈಸನ್ ರದ್ದು ಮಾಡಿ ತ್ವರಿತವಾಗಿ ಮೆಟ್ಟಿಲುಗಳು ನಿರ್ಮಿಸಬೇಕು. ನಾಗರಾಳ ಕೆರೆ ಲೋಹಾರ್ ಮುಲ್ಲಾಮರಿ ಜಲಾಶಯ ಹಾಗೂ ಚಂದ್ರಂಪಳ್ಳಿ ಕೆರೆಯಿಂದ ನೀರು ಎರಡು ದಿನಗಳಲ್ಲಿ ಬಿಡದೆ ಇದ್ದಲ್ಲಿ ರೈತರ ವತಿಯಿಂದ

ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಚಿಮ್ಮನಚೋಡ್ ಗ್ರಾಮದ ಹತ್ತಿರ ಭಾಲ್ಕಿ - ಹುಮ್ನಾಬಾದ್ ರಾಜ್ಯ ಹೆದ್ದಾರಿ ರಸ್ತೆ ಕುಸಿದು ಬಿದ್ದಿರುವ ಸೇತುವೆಯ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು. ರೈತರ ಪರವಾಗಿ ಕ್ಷೇತ್ರದ ಶಾಸಕರು ಮತ್ತು ಸಂಸದರು ಜಿಲ್ಲೆಯ ಉಸ್ತುವಾರಿ ಸಚಿವರು ಕೂಡಲೇ ಅಧಿಕಾರಿಗಳಿಗೆ ಸೂಚಿಸಿ ನೀರು ಬಿಡುವಂತೆ ನಿರ್ದೇಶನ ನೀಡಬೇಕೆಂದು ಅಗ್ರಹಿಸಿದ್ದಾರೆ.

 ಈ ಸಂದರ್ಭದಲ್ಲಿ ಗೋಪಾಲ ಎಂ.ಪಿ, ಸಂಗನಬಸಯ್ಯ ಮಠ, ಅಮೃತ ಮಡಿವಾಳ, ಮಲ್ಲಿಕಾರ್ಜುನ ಕೂಡಂಬಲ್ ಚಿಮ್ಮನಚೋಡ, ದಯಾಳಕುಮಾರ ದಂಡಿನ, ಮೌನೇಶ್ ಮುಸ್ತರಿ ಸೇರಿ ರೈತರು ಉಪಸ್ಥಿತರಿದ್ದರು.