ವಿಕಸಿತ ಭಾರತಕ್ಕಾಗಿ ನಶಾಮುಕ್ತ ಭಾರತ

ವಿಕಸಿತ ಭಾರತಕ್ಕಾಗಿ ನಶಾಮುಕ್ತ ಭಾರತ

ವಿಕಸಿತ ಭಾರತಕ್ಕಾಗಿ ನಶಾಮುಕ್ತ ಭಾರತ

ಕಲಬುರ್ಗಿ:ದಿನಾಂಕ: 16 ಅಕ್ಟೋಬರ್ 2026 

ಹೈ.ಕ.ಶಿ. ಸಂಸ್ಥೆಯ , ಎಂ ಎಸ್‌, ಇರಾಣಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಇಂದು ದಿನಾಂಕ: 16.10.2026 ರಂದು 

 “ವಿಕಸಿತ ಭಾರತಕ್ಕಾಗಿ ನಶಾಮುಕ್ತ ಭಾರತ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಲಬುರಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶರಣಬಸಪ್ಪ ಕ್ಯಾತ್ನಾಳ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮಾದಕ ವಸ್ತುಗಳು ಹಾಗೂ ಇತರ ಅಮಲು ಪದಾರ್ಥಗಳಿಂದ ದೂರವಿರುವುದರ ಮಹತ್ವವನ್ನು ಒತ್ತಿಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾದಕ ವಸ್ತುಗಳ ದುರ್ಬಳಕೆಯಿಂದ ದೂರವಿದ್ದು, ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು, ಆರೋಗ್ಯಕರ ಹಾಗೂ ಶಿಸ್ತಿನ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಅತಿಥಿಗಳಾದ ಡಾ. ಚಂದ್ರಕಾಂತ ಬಿರಾದಾರ ಅವರು ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಕಾಪಾಡುವಲ್ಲಿ ಯೋಗದ ಮಹತ್ವದ ಕುರಿತು ಮಾಹಿತಿ ನೀಡಿದರು. 

ಶ್ರೀಮತಿ ಸುಜಾತಾ ಪಾಟೀಲ, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರಾದ ಅವರು ತಂಬಾಕು ಸೇವನೆಯ ದುಷ್ಪರಿಣಾಮಗಳು ಮತ್ತು ತಂಬಾಕು ಬಳಕೆಯನ್ನು ನಿಯಂತ್ರಿಸುವ ಕ್ರಮಗಳ ಕುರಿತು ಮಾಹಿತಿ ನೀಡಿದರು. ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಅಪಾಯಗಳನ್ನು ವಿವರಿಸಿ, ತಂಬಾಕು ಸಂಬಂಧಿತ ರೋಗಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವನ್ನು ಒತ್ತಿಹೇಳಿದರು. ಮತ್ತು ಆತ್ಮರಕ್ಷಣೆಯ ಮಹತ್ವದ ಕುರಿತು ಮಾತನಾಡಿ, ಸಂಭವನೀಯ ಬೆದರಿಕೆಗಳು ಮತ್ತು ಅಪಾಯಕಾರಿ ಸಂದರ್ಭಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಳಸಬಹುದಾದ ವಿವಿಧ ತಂತ್ರಗಳನ್ನು ವಿವರಿಸಲಾಯಿತು. 

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರಾಜಶೇಖರ ಬೀರನಳ್ಳಿ ಅವರು “. ಆರೋಗ್ಯಕರ ಮತ್ತು ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು, ಮಾದಕ ವಸ್ತುಗಳ ದುರ್ಬಳಕೆಯಿಂದ ದೂರವಿರಲು ಹಾಗೂ ರಾಷ್ಟ್ರ ನಿರ್ಮಾಣದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಎನ್.ಎಸ್. ಎಸ್. ಕಾರ್ಯಕ್ರಮಾಧಿಕಾರಿ ಡಾ. ಪ್ರಾಣೇಶ ಎಸ್. ಅವರು ಕಾರ್ಯಕ್ರಮದಲ್ಲಿದ್ದ ಸಭಿಕರನ್ನು ಮತ್ತು ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ಕೋರಿದರು.

ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ಸವಿತಾ ಬೋಳಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಂಕರಪ್ಪ ಕೆ. ಅವರು ವಂದನಾರ್ಪಣೆಯನ್ನು ಮಾಡಿದರು