ಮಹಾಶೈವ ಧರ್ಮಪೀಠದಲ್ಲಿ ಶಿವೋಪಶಮನ ಕಾರ್ಯ
ಮಹಾಶೈವ ಧರ್ಮಪೀಠದಲ್ಲಿ ಶಿವೋಪಶಮನ ಕಾರ್ಯ
ದೇವದುರ್ಗ : ಮಾತನಾಡುವ ಮಹಾದೇವ'ಎಂದು ಪ್ರಸಿದ್ಧನಾಗಿರುವ ಗಬ್ಬೂರಿನ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಅಕ್ಟೋಬರ್ 25 ರ ಆದಿತ್ಯವಾರದಂದು ಶಿವೋಪಶಮನ ಕಾರ್ಯ ನಡೆಯಿತು.ವಿಶ್ವೇಶ್ವರ ಶಿವನ ಅಭಯವನ್ನಪೇಕ್ಷಿಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಯೋಗೀಶ್ವರ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.
ವಿಶ್ವೇಶ್ವರ ಶಿವನು ತನ್ನನ್ನು ನಂಬಿ ಬರುವವರ ಸಂತಾನಹೀನತೆಯನ್ನು ದೂರಮಾಡಿ ಸಂತಾನಭಾಗ್ಯವನ್ನಿತ್ತು ಕರುಣಿಸುತ್ತಾ'ಸಂತಾನೇಶ್ವರ ಶಿವ'ನೆಂದು ಹೆಸರುಗೊಂಡು ಲೀಲೆ ಮೆರೆಯುತ್ತಿರುವುದರಿಂದ ರಾಜ್ಯದ ದೂರದೂರದ ಊರುಗಳಿಂದ ಸಂತಾನಾಪೇಕ್ಷಿಗಳು ಇಂದು ವಿಶ್ವೇಶ್ವರ ಶಿವನ ಸನ್ನಿಧಿಗೆ ಬಂದಿದ್ದರು.ಪೀಠಾಧ್ಯಕ್ಷರಾದ ಯೋಗೀಶ್ವರ ಶ್ರೀ ಮುಕ್ಕಣ್ಣ ಕರಿಗಾರ ಅವರು ಇಂದಿನ ದಾಸೋಹಿಗಳಾದ ಹುಮನಾಬಾದಿನ ಕವಿತಾ ಪ್ರಕಾಶ ಮೇತ್ರೆ ದಂಪತಿಗಳನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.
ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ಅರ್ಚಕ ದೇವರಾಜ ಕರಿಗಾರ, ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಮಾಲೀಪಾಟೀಲ್ ಹೊನ್ನಟಗಿ,ಬಾಬುಗೌಡ ಯಾದವ್ ಸುಲ್ತಾನಪುರ,ಮೃತ್ಯುಂಜಯ ಯಾದವ್,ಪತ್ರಕರ್ತರುಗಳಾದ ರಘುನಾಥರೆಡ್ಡಿ ಮನ್ಸಲಾಪುರ,ಬಸವರಾಜ ಶಿಣ್ಣೂರ,ರಮೇಶ ಖಾನಾಪುರ ಹಾಗೂ ಕಾರ್ಯಕರ್ತರುಗಳಾದ ಶಿವರಾಜ ಪವಾರ್,ಯಲ್ಲಪ್ಪ ಕರಿಗಾರ,ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರಭದ್ರಯ್ಯಸ್ವಾಮಿ ಹಳ್ಳಿ,ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ,ಬಾಗಲಕೋಟೆಯಧರ್ಮಣ್ಣ,ಚವಡೆಪ್ಪ,ತಿಪ್ಪಯ್ಯ ಭೋವಿ,ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

