ಮಹಿಳಾ ಜ್ಞಾನವಿಕಾಸ ವಿಚಾರಗೋಷ್ಠಿ ಸವಿತಾ ಗುತ್ತೇದಾರ್ ದೀಪ ಪ್ರಜ್ವಲನೆ
ಮಹಿಳೆಯರ ಸಬಲೀಕರಣಕ್ಕೆ ಸ್ವಾವಲಂಬನೆಯ ದಿಟ್ಟ ಹೆಜ್ಜೆಗೆ ಕರೆ
ಮಹಿಳಾ ಜ್ಞಾನವಿಕಾಸ ವಿಚಾರಗೋಷ್ಠಿ ಸವಿತಾ ಗುತ್ತೇದಾರ್ ದೀಪ ಪ್ರಜ್ವಲನೆ
ಕಲಬುರಗಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲಬುರಗಿ ತಾಲೂಕು ಘಟಕದ ನೇತೃತ್ವದಲ್ಲಿ ಜ್ಞಾನ ವಿಕಾಸದ ಮಹಿಳೆಯರ ಸಬಲೀಕರಣಕ್ಕಾಗಿ ಸ್ವಾವಲಂಬನೆಯ ದಿಟ್ಟ ಹೆಜ್ಜೆ ಇಡುವ ಸಮಗ್ರ ಮಾಹಿತಿ ನೀಡುವ ವಿಚಾರ ಸಂಕಿರಣವನ್ನು ಸಮಾಜ ಸೇವಕಿ ಸವಿತಾ ಸತೀಶ್ ಗುತ್ತೇದಾರ್ ದೀಪ ಬೆಳಗಿಸಿ ಚಾಲನೆ ನೀಡಿದರು.
ಕಲಬುರಗಿಯ ಶ್ರೀ ಸಾಯಿ ಮಂದಿರದ ಸಭಾಂಗಣದಲ್ಲಿ ಆ 24ರಂದು ಶನಿವಾರ ನಡೆದ ಕಲಬುರ್ಗಿ ತಾಲೂಕು ಮಟ್ಟದ ವಿಜ್ಞಾನ ವಿಕಾಸದ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಆರ್ಥಿಕ ಸೇರ್ಪಡೆ ಸ್ವಯಂ ಸೇವಾ ಸಂಸ್ಥೆಯ ಪಾತ್ರ ಉಳಿತಾಯದ ಮಹತ್ವ ಆರೋಗ್ಯ ಪಾಲನೆ ಕುಟುಂಬ ಪೋಷಣೆ ಮುಂತಾದ ವಿಷಯಗಳ ಕುರಿತು ಒಂದು ದಿನದ ವಿಚಾರ ಸಂಕೀರ್ಣ ಏರ್ಪಡಿಸಿ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಸವಿತಾ ಬೀಳಗಿ ರಾಷ್ಟ್ರ ಸೇವಿಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸುಮಂಗಲಾ ಚಕ್ರವರ್ತಿ ಮತ್ತು ಮನೋತಜ್ಞರಾದ ಡಾ. ಜಯಶ್ರೀ ಭಾಗವಹಿಸಿದರು. ಮಹಿಳಾ ಸಬಲೀಕರಣಕ್ಕೆ ಸ್ವಾವಲಂಬನೆ ಯೊಂದಿಗೆ ದಿಟ್ಟ ಹೆಜ್ಜೆ ಇಟ್ಟು ಅಭಿವೃದ್ಧಿ ಹೊಂದಲು ಕರೆ ನೀಡಲಾಯಿತು. ಮಕ್ಕಳ ಯಶಸ್ಸಿನಲ್ಲಿ ಪೋಷಕರ ಪಾತ್ರದ ಬಗ್ಗೆ ಕೂಡಾ ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದ್ದು ತಾಲೂಕು ಯೋಜನಾಧಿಕಾರಿಗಳಾದ ಸಂಗಪ್ಪ ಮತ್ತು ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಜ್ಯೋತಿ ನಿರ್ವಹಣೆ ಮಾಡಿದರು . ನಂತರ ಮಂಜೂರಾತಿ ಆಗಿರುವ ಫಲಾನುಭವಿಗಳಿಗೆ ವಾತ್ಸಲ್ಯ ಮನೆ, ಮಾಶಾಸನ ಹಸ್ತಾಂತರ, ಸುಜ್ಞಾನ ನಿಧಿ ಮಂಜೂರಾತಿ ಆಗಿರುವ ಮಂಜೂರಾತಿ ಪತ್ರ ವಿತರಿಸಲಾಯಿತು. ಜ್ಞಾನ ದೀಪ ಶಿಕ್ಷಕರ ಮಂಜೂರಾತಿ ಪತ್ರಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.ನಂತರ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಾಯಿತು.ಬಳಿಕ ಬಹುಮಾನಗಳ ವಿತರಿಸಲಾಯಿತು.

