ಹಾರಕೂಡ ಶಾಲೆಗೆ ಶೇ. 94 ರಷ್ಟು ಫಲಿತಾಂಶ
ಹಾರಕೂಡ ಶಾಲೆಗೆ ಶೇ. 94 ರಷ್ಟು ಫಲಿತಾಂಶ
ಚಿಂಚೋಳಿ - ಕಳೆದ ಮಾರ್ಚ್, ಏಪ್ರಿಲ್ ತಿoಗಳಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆಗೆ ಶೇಕಡಾ 94 ರಷ್ಟು ಫಲಿತಾಂಶ ಲಭ್ಯವಾಗಿದೆಯೆಂದು ಆಡಳಿತಾಧಿಕಾರಿ ಗೀತಾರಾಣಿ ಐನೋಳಿ ತಿಳಿಸಿದ್ದಾರೆ. ಪರೀಕ್ಷೆ ಬರೆದ 69 ವಿದ್ಯಾರ್ಥಿಗಳಲ್ಲಿ 65 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶಾಲೆಗೆ ಶೇಕಡ 94 ರಷ್ಟು ಫಲಿತಾಂಶ ಲಭ್ಯವಾಗಿದೆ. ಅನುಷಾ ಚಂದ್ರಕಾಂತ ಶೇ 88.32, ಸಾರಿಕಾ ಶ್ರೀಶೈಲ ಶೇ 87.8, ಮಹೇಶ್ ರಾಜಶೇಖರ್ 86.8, ಇರ್ಫಾನ್ ಸೈ. ಇಮ್ರಾನ ಶೇ 85.6 ಹೀಗೆ ನಾಲ್ಕು ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ದರ್ಜೆಯಲ್ಲಿ 22, ದ್ವಿತೀಯ ದರ್ಜೆಯಲ್ಲಿ 22, ಹಾಗೂ 17 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮಕ್ಕಳ ಫಲಿತಾಂಶಕ್ಕೆ ಶಾಲೆಯ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧನೆ ಮಾಡಿದ ಎಲ್ಲ ಮಕ್ಕಳಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಶುಭಾಶಿರ್ವಾದ ತಿಳಿಸಿದ್ದಾರೆ.
