ವಿಜಯ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಪ್ರೊ. ಶ್ರೀಕಂಠ ಎ.ಎಸ್. ಅಧಿಕಾರ ಸ್ವೀಕಾರ
ವಿಜಯ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಪ್ರೊ. ಶ್ರೀಕಂಠ ಎ.ಎಸ್. ಅಧಿಕಾರ ಸ್ವೀಕಾರ
ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಜಯನಗರದ ವಿಜಯ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಸಂಸ್ಥೆಯ ಹಿರಿಯ ಶ್ರೇಣಿ ಪ್ರಾಧ್ಯಾಪಕರಾದ ಪ್ರೊ. ಶ್ರೀಕಂಠ ಎ.ಎಸ್. ಅವರು 2026ರ ಮೇ 30ರಂದು ಅಧಿಕಾರ ವಹಿಸಿಕೊಂಡರು.
ದೀರ್ಘಕಾಲದಿಂದ ಕಾಲೇಜಿನ ಶೈಕ್ಷಣಿಕ, ಆಡಳಿತಾತ್ಮಕ ಹಾಗೂ ವಿದ್ಯಾರ್ಥಿ ಕಲ್ಯಾಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರೊ. ಶ್ರೀಕಂಠ ಎ.ಎಸ್. ಅವರ ನೇಮಕಾತಿ ಕಾಲೇಜಿನ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಉಪ ಪ್ರಾಂಶುಪಾಲರಾದ ಶ್ರೀಮತಿ ಆಶಾಲತಾ ಬಿ. ಅವರು ನೂತನ ಪ್ರಾಂಶುಪಾಲರಿಗೆ ಶುಭಾಶಯಗಳನ್ನು ಕೋರಿ, ಅವರ ಆಡಳಿತಾವಧಿಯಲ್ಲಿ ಕಾಲೇಜು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ದಾಖಲಿಸಲಿ ಎಂದು ಹಾರೈಸಿದರು.
ಕಾಲೇಜಿನ ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಹ ಪ್ರೊ. ಶ್ರೀಕಂಠ ಎ.ಎಸ್. ಅವರಿಗೆ ಅಭಿನಂದನೆ ಸಲ್ಲಿಸಿ, ಯಶಸ್ವಿ ಆಡಳಿತಕ್ಕಾಗಿ ಶುಭ ಹಾರೈಸಿದರು.
